Connect with us

    MANGALORE

    ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ವಿಜೃಂಭಣೆಯ ಷಷ್ಠಿ ಮಹೋತ್ಸವ

    ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ವಿಜೃಂಭಣೆಯ ಷಷ್ಠಿ ಮಹೋತ್ಸವ

    ಮಂಗಳೂರು ನವೆಂಬರ್ 24: ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ಹದಿನೆಂಟು ಪೇಟೆ ದೇವಳವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ  ದೇವಸ್ಥಾನದ ಷಷ್ಠಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಷಷ್ಠಿ ಪ್ರಯುಕ್ತ ಶ್ರೀ ದೇವರ ಬ್ರಹ್ಮ  ರಥೋತ್ಸವ ಸಹಸ್ರಾರು  ಭಾವುಕ  ಭಜಕರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಿತು.

    ಷಷ್ಠಿ ಮಹೋತ್ಸವ ಪ್ರಯುಕ್ತ ಬೆಳಿಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆ, ಶತ ಕಲಶಾಭಿಷೇಕ , ಗಂಗಾಭಿಷೇಕ  ನಡೆದವು. ಬಳಿಕ ಯಜ್ಞ  ಮಂಟಪದಲ್ಲಿ ಉಭಯ  ದೇವರುಗಳಾದ  ಭದ್ರ  ನರಸಿಂಹ ಹಾಗೂ ಸುಭ್ರಮಣ್ಯ ದೇವರ ಸಮ್ಮುಖದಲ್ಲಿ ಯಜ್ಞದ  ಪೂರ್ಣಾಹುತಿ ನಡೆಯಿತು. ನಂತರ ವಿಶೇಷವಾಗಿ ಪುಷ್ಪದಿಂದ ಅಲಂಕರಿಸಿದ ಸ್ವರ್ಣ ಲಾಲಕಿಯಲ್ಲಿ ಶ್ರೀ ದೇವರ ವಿಗ್ರಹಗಳನ್ನು  ಇರಿಸಿ ಭುಜ ಸೇವೆಯ ಮೂಲಕ  ಸ್ವಯಂಸೇವಕರಿಂದ   ಪಲ್ಲಕಿ  ಉತ್ಸವ ನಡೆಯಿತು .

    ಬ್ರಹ್ಮ ರಥದ  ಪೂಜೆ  ಶ್ರೀ ದೇವರು ರಥಾರೂಢರಾದ  ಬಳಿಕ ಮಂಗಳಾರತಿ ನಡೆದು  ರಥೋತ್ಸವ ವು ಕೇರಳ, ಕರ್ನಾಟಕ , ಮುಂಬೈ  , ಗುಜರಾತ್  , ದೆಹಲಿ  ಹಾಗೂ ವಿದೇಶದಿಂದ  ನೂರಾರು  ಸಮಾಜ ಭಾಂದವರು ಪಾಲ್ಗೊಂಡು ಪುನೀತರಾದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *