TECHNOLOGY
ಇನ್ನು ನಿಮ್ಮ ಆಧಾರ್ ನಿಮ್ಮ ಬೆರಳ ತುದಿಯಲ್ಲಿ..
ಇನ್ಮುಂದೆ ನೀವು ನಿಮ್ಮ ಆಧಾರ್ ಕಾರ್ಡ್ ಎಲ್ಲೆಂದರಲ್ಲಿ ಹೊತ್ತೊಯ್ಯುವ ಅಗತ್ಯವಿಲ್ಲ, ಅಥವಾ ನಂಬರ್ ನೆನಪಿಟ್ಟುಕೊಳ್ಳುವ ಅಗತ್ಯವೂ ಇಲ್ಲಿ. ಆಧಾರ್ ಇನ್ನು ನಿಮ್ಮ ಬೆರಳ ತುದಿಯಲ್ಲೇ ಇರಲಿದೆ. ಬಳಕೆದಾರರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ವಿನೂತನ ಆಧಾರ್ ಮೊಬೈಲ್ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ಸದ್ಯ ಆ್ಯಂಡ್ರಾಯ್ದ್ ಆವೃತ್ತಿಯ ಪೋನ್ ಗಳಿಗೆ ಮಾತ್ರ ಈ ಆ್ಯಪ್ (ಬೆಟಾ ಆವೃತ್ತಿ; ಮುಂದಿನ ದಿನಗಳಲ್ಲಿ ಸುಧಾರಿತ ಆ್ಯಪ್ ಬರಲಿದೆ) ಲಭ್ಯವಿದೆ. ‘ಎಂಆಧಾರ್’ ಹೆಸರಿನ ಆ್ಯಪ್ ಇದಾಗಿದ್ದು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದು ಈಗಾಗಲೇ ಲಭ್ಯವಿದೆ.
ಇನ್ ಸ್ಟಾಲ್ ಮಾಡೋದು ಹೇಗೆ ?
ಇದಕ್ಕಾಗಿ ಗೂಗಲ್ ಪ್ಲೇಸ್ಟೋರ್ http://bit.ly/2ucqe91 ಮೂಲಕ ಡೌನ್ ಲೋಡ್ ಮಾಡಬೇಕು. ಆ್ಯಪ್ ಅನ್ನು ಬಳಸಲು ಫೋನ್ ನಲ್ಲಿ ಆಧಾರ್ ಗೆ ನೀಡಿದ ಫೋನ್ ಸಂಖ್ಯೆ ಅವಶ್ಯಕವಾಗಿದೆ. ಡೌನ್ ಲೋಡ್ ಬಳಿಕ ಆ್ಯಪ್ ಗೆ ಪಾಸ್ ವರ್ ನೀಡಬೇಕಿರುತ್ತದೆ. ಬಳಿಕ ಆಧಾರ್ ಸಂಖ್ಯೆಯನ್ನು ನಮೂದಿಸಿ , ವನ್ ಟೈಮ್ ಪಾಸ್ ವರ್ಡ್ ಅನ್ನು ನೀಡಿ ಆಧಾರ್ ಜತೆಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಖಾತರಿ ಮಾಡಬೇಕಾಗುತ್ತದೆ. ಒಂದು ವೇಳೆ ಬೇರೆಯ ಮೊಬೈಲ್ ನಂಬರ್ , ಅಥವಾ ಆಧಾರ್ ಸಂಖ್ಯೆ ತಪ್ಪಾಗಿ ಕೊಟ್ಟಿದ್ದರೆ, ಆಧಾರ್ ಆ್ಯಪ್ ಬಳಕೆ ಸಾಧ್ಯವಾಗುವುದಿಲ್ಲ.
ಆ್ಯಪ್ ನ ಪ್ರಯೋಜನ..
ಈ ಆ್ಯಪ್ ಅನ್ನು ಮೊಬೈಲ್ ನಲ್ಲಿ ಅಳವಡಿಸಿಕೊಂಡರೆ, ಸರಕಾರಿ ಕಛೇರಿಗಳಲ್ಲಿ ಅಥವಾ ಇತರೆಡೆ ಗುರುತು ಪತ್ರಗಳನ್ನು ಕೇಳಿದಾಗ ಕೂಡಲೇ ಮೊಬೈಲ್ ನಿಂದ ತೆಗೆದು ತೋರಿಸಬಹುದು. ಅಲ್ಲದೇ ಬಯೋಮೆಟ್ರಿಕ್ ಬಳಕೆಯನ್ನು ಲಾಕ್-ಅನ್ ಲಾಕ್ ಮಾಡುವ ಸೌಲಭ್ಯ ಇದರಲ್ಲಿರಲಿದೆ. ಇದರಿಂದ ಆಧಾರ್ ದುರುಪಯೋಗವನ್ನು ತಪ್ಪಿಸಿಕೊಳ್ಳಬಹುದು. ಆಧಾರ್ ಫ್ರೋಫೈಲ್ ಅನ್ನು ಕ್ಯು ಈರ್ ಕೋಡ್, ಬಾರ್ ಕೋಡ್ ಮುಖಾಂತರ ಹಂಚಿಕೊಳ್ಳಲೂ ಸಾಧ್ಯವಿದೆ. ಅಲ್ಲದೇ ವಿವಿಧ ಟೆಲಿಕಾಂ ಕಂಪನಿಗಳು, ಗ್ಯಾಸ್ ಸಂಪರ್ಕ ಇತ್ಯಾದಿಗಳಿಗೆ ಬೇಕಾದ ಇಕೆವೈಸಿ( ಇಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್) ಅನ್ನು ಸುಲಭವಾಗಿ ನೀಡಲು ಸಾಧ್ಯವಿದೆ.
ಆ್ಯಪ್ ಬಳಕೆ ಸುರಕ್ಷಿತವೇ ?
ಆಧಾರ್ ಆ್ಯಪ್ ನ ಉದ್ದೇಶ ಮೊಬೈಲ್ ಮೂಲಕ ಕೂಡಲೇ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಸುಲಭಗೊಳಿಸುವ ಯತ್ನ. ಆಧಾರ್ ಮಾಹಿತಿ ಹಂಚುವಿಕೆಗೂ ಮೊದಲು ಆ್ಯಪ್ ಗೆ ಬಳಕೆದಾರರು ನೀಡಿದ ಪಾಸ್ ವರ್ಡ್ ಅನ್ನು ನಮೂದಿಸಬೇಕು. ಪ್ರತಿ ಬಾರಿಯೂ ಬಳಕೆ ಮೊದಲು ಪಾಸ್ ವರ್ಡ್ ಹಾಕಬೇಕಿರುತ್ತದೆ. ಇದರಿಂದ ಒಂದು ವೇಳೆ ಮೊಬೈಲ್ ಕಳೆದುಹೋದರೂ ಆಧಾರ್ ಮಾಹಿತಿ ಬೇರೆಯವರ ಪಾಲಾಗುವುದು ಸಾಧ್ಯವಿಲ್ಲ. ಜತೆಗೆ ಆಧಾರ್ ಬಯೋಮೆಟ್ರಿಕ್ ಮಾಹಿತಿಗಳು ಸೋರಿಕೆಯಾಗದಂತೆ ತಡೆಯಲೂ ಲಾಕ್-ಅನ್ ಲಾಕ್ ವ್ಯವಸ್ಥೆ ಇದೆ. ಒಂದು ವೇಳೆ ಇದನ್ನು ಲಾಕ್ ಮಾಡಿದಲ್ಲಿ ಹೊಸ ಸೇವೆಗಳಿಗೆ ಆಧಾರ್ ಮಾಹಿತಿ ನೀಡಲು ಸಾಧ್ಯವಿಲ್ಲ.