LATEST NEWS
ಈಗ ನಿಮ್ಮ ಆಧಾರ್ ಯಾವುದಕ್ಕೆಲ್ಲಾ ಲಿಂಕ್ ಆಗಿದೆ ಎಂದು ನೋಡಲು ಅವಕಾಶ
ಈಗ ನಿಮ್ಮ ಆಧಾರ್ ಯಾವುದಕ್ಕೆಲ್ಲಾ ಲಿಂಕ್ ಆಗಿದೆ ಎಂದು ನೋಡಲು ಅವಕಾಶ
ಮಂಗಳೂರು ಡಿಸೆಂಬರ್ 10 : ಸದ್ಯ ಸರಕಾರದ ಎಲ್ಲಾ ಯೋಜನೆಗಳು, ಬ್ಯಾಂಕ್, ಮೊಬೈಲ್ ನಂಬರ್ ಗಳಿಗೆ ಆಧಾರ್ ಸಂಖ್ಯೆಯ ಜೋಡಣೆಯನ್ನು ಸರಕಾರ ಕಡ್ಡಾಯಗೊಳಿಸಿದೆ. ಆದರೆ ನೀವು ಯಾವುದೆಲ್ಲಾ ಸೇವೆಗಳಿಗೆ ಆಧಾರ ನಂಬರ್ ನ್ನು ಲಿಂಕ್ ಮಾಡಿದ್ದಿರಾ ಎಂದು ತಿಳಿದುಕೊಳ್ಳಲು ಆಧಾರ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.
ಇದರಲ್ಲಿ ನೀವು ಈವರೆಗೆ ಯಾವುದೆಲ್ಲಾ ಸೇವೆಗಳಿಗೆ ಆಧಾರ ಲಿಂಕ್ ಮಾಡಿರುವುದು, ನಿಮ್ಮ ಆಧಾರ ಸಂಖ್ಯೆಯಿಂದ ಬಂದಿರುವ ಓಟಿಪಿ ಗಳ ವಿವರಗಳು ಲಭ್ಯವಿದೆ. ಈ ಸೇವೆಯ ಮೂಲಕ ನಿಮ್ಮ ಆಧಾರನ್ನು ಯಾರಾದರೂ ಅಕ್ರಮವಾಗಿ ಬಳಸಿಕೊಂಡಿದ್ದರು ಅದರ ಬಗ್ಗೆ ಮಾಹಿತಿ ತಿಳಿಯುತ್ತದೆ. ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಮಾಡಿದ ನಂತರ ನಿಮ್ಮ ಮಾಹಿತಿ ಎಲ್ಲಾದರೂ ಸೋರಿಕೆಯಾಗಿದೆಯೇ ಎಂಬ ಮಾಹಿತಿ ಕೂಡ ಸಿಗುತ್ತದೆ.
ನಿಮ್ಮ ಆಧಾರ್ ಲಿಂಕ್ ನ ಮಾಹಿತಿಯನ್ನು ಪಡೆಯಲು
ಈ ವೆಬ್ ಸೈಟ್ ಗೆ ಭೇಟಿ ನೀಡಬೇಕು.
https://resident.uidai.gov.in/notification-aadhaar
1. ವೆಬ್ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ ಕೇಳಲಾಗುತ್ತದೆ. ನಂತರ ಸೆಕ್ಯುರಿಟಿ ನಂಬರ್ ಹಾಕಿದ ನಂತರ . ಜನರೆಟ್ ಓಟಿಪಿ ಬಟನ್ ಅನ್ನು ಕ್ಲಿಕ್ ಮಾಡಬೇಕು.
2. ನಂತರದ ಪುಟದಲ್ಲಿ ನಿಮಗೆ ಯಾವ ರೀತಿಯ ಮಾಹಿತಿ ಬೇಕೋ, ಆ ರೀತಿಯ ನಮೂನೆಗಳಿಗೆ ಸಂಬಂಧ ಪಟ್ಟ ಖಾಲಿ ಸ್ಥಳಗಳನ್ನು ತುಂಬಿಸಿ ಮಾಹಿತಿ ಪಡೆಯಬಹುದು.