LATEST NEWS
ಕಾಂಗ್ರೆಸ್ ನೇತೃತ್ವದ “ಸಾಮರಸ್ಯ ನಡಿಗೆ”ಗೆ ಮುಸ್ಲಿಮರ ಬೆಂಬಲವಿಲ್ಲ
ಕಾಂಗ್ರೆಸ್ ನೇತೃತ್ವದ “ಸಾಮರಸ್ಯ ನಡಿಗೆ”ಗೆ ಮುಸ್ಲಿಮರ ಬೆಂಬಲವಿಲ್ಲ
ಮಂಗಳೂರು, ಡಿಸೆಂಬರ್ 10 :ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈ ಅವರ ನೇತೃತ್ವದ ಕಾಂಗ್ರೆಸ್ ಸಾಮರಸ್ಯ ನಡಿಗೆಗೆ ಮುಸ್ಲಿಂ ಒಕ್ಕೂಟ ಬೆಂಬಲ ನಿರಾಕರಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಮುಸ್ಲೀಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ನಾಮಧಾರಿ ಜಾತ್ಯತೀತ ಕಾಂಗ್ರೆಸ್ ನಾಯಕರ “ಸಾಮರಸ್ಯ ನಡಿಗೆ”ಗೆ ಮುಸ್ಲಿಮರ ಬೆಂಬಲವಿಲ್ಲ.
ಮುಸ್ಲಿಮರ ಅನ್ಯಾಯಗಳಿಗೆ ಮತ್ತು ನೋವಿಗೆ ಧ್ವನಿಯಾಗದ ಇಬ್ಬರು ಸಚಿವರ ಈ ನಡಿಗೆ ರಾಜಕೀಯ ಸ್ವಾರ್ಥದ್ದು ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರ ಸಮಸ್ಯೆಗಳಿಗೆ ನ್ಯಾಯ, ಪರಿಹಾರ, ಕ್ರಮ ಕೈಗೊಳ್ಳಲು ಜಿಲ್ಲೆಯ ಸಚಿವರಾದ ರಮನಾಥ ರೈ, ಯು.ಟಿ .ಖಾದರ್ ವಿಫಲರಾಗಿದ್ದಾರೆಂದು ಒಕ್ಬಕೂಟ ಆರೋಪಿಸಿದೆ.
ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ಮುಸ್ಲೀಂ ಪವಿತ್ರ ಗ್ರಂಥ ಕುರಾನ್ ಅನ್ನು ಅವಮಾನಗೊಳಿಸಿದ ಪ್ರಕರಣದಲ್ಲೂ ಈ ಸಚಿವರುಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಕಾರಣಗಳಿಂದ ಸಾಮರಸ್ಯ ಜಾಥಾಕ್ಕೆ ಒಕ್ಕೂಟ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.
ವಿವಿಧ ಸಂಘಟನೆಗಳ ಸಹಯೋಗದಲ್ಲಿ ಡಿಸೆಂಬರ್ 12 ರಂದು ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಆಯೋಜಿಸಿದೆ.
ಈ ಜಾಥಾದಲ್ಲಿ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಸಹಿತ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
You must be logged in to post a comment Login