LATEST NEWS
ರಾಜೀನಾಮೆಗೆ ಮುಂದಾದ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್

ಢಾಕಾ ಮೇ 23: ಬಾಂಗ್ಲಾದೇಶದ ಜನರನ್ನು ಉದ್ದಾರ ಮಡುತ್ತೇನೆ ಎಂದು ಹೇಳಿ ಶೇಖ್ ಹಸೀನಾ ಅವರ ಸರಕಾರವನ್ನು ವಿಧ್ಯಾರ್ಥಿಗಳ ದಂಗೆಯ ಮೂಲಕ ಕಿತ್ತೆಸೆದಿದ್ದ ಮಹಮ್ಮದ್ ಯೂನಸ್ ಅವರಿಗೆ ಇದೀಗ ಬಾಂಗ್ಲಾದೇಶದಲ್ಲಿ ಸರಕಾರ ನಡೆಸುವುದು ಅಷ್ಟು ಸುಲಭ ಅಲ್ಲ ಎನ್ನವುದು ಮನವರಿಕೆಯಾದಂತಿದೆ. ಈ ಹಿನ್ನಲೆ ಇದೀಗ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ರಾಜೀನಾಮೆ ನೀಡುವ ವಿಚಾರ ಮುನ್ನೆಲೆಗೆ ಬಂದಿದ್ದು ರಾಜಕೀಯ ಪಕ್ಷಗಳಲ್ಲಿ ಒಮ್ಮತದ ಕೊರತೆಯಿಂದಾಗಿ ಕೆಲಸ ಮಾಡುವುದು ಕಷ್ಟಕರವಾಗುತ್ತಿದೆ ಎಂದು ಯೂನಸ್ ಹೇಳಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರಲು ವಿಫಲವಾದ ಕಾರಣ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳೇ ರೂಪಿಸಿರುವ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ಸಂಚಾಲಕ ನಹಿದ್ ಇಸ್ಲಾಂ ತಿಳಿಸಿರುವುದಾಗಿ ಬಿಬಿಸಿ ಬಾಂಗ್ಲಾ ವರದಿ ಮಾಡಿದೆ.

ಇಂದು ಬೆಳಿಗ್ಗೆಯಿಂದ ಮೊಹಮ್ಮದ್ ಯೂನಸ್ ಅವರ ರಾಜೀನಾಮೆ ಸುದ್ದಿ ಕೇಳಿ ಬರುತ್ತಿದೆ. ಇದೇ ವಿಚಾರದ ಬಗ್ಗೆ ಚರ್ಚಿಸಲು ನಾನು ಅವರನ್ನು ಭೇಟಿ ಮಾಡಿದ್ದೆ. ಸದ್ಯದ ಪರಿಸ್ಥಿತಿಗೆ ಅಧರಿಸಿ ರಾಜೀನಾಮೆ ನೀಡಲು ಚಿಂತನೆ ನಡೆಸುತ್ತಿರುವುದಾಗಿ ಅವರು ಹೇಳಿದರು, ವಿಶ್ವಾಸ- ಭರವಸೆಯ ಸ್ಥಾನ ಅವರಿಗೆ ಸಿಗದಿದ್ದರೆ ಅವರು ಏಕೆ ಅಲ್ಲಿಯೇ ಇರುತ್ತಾರೆ?” ಎಂದು ನಹಿದ್ ಇಸ್ಲಾಂ ಪ್ರಶ್ನಿಸಿದ್ದಾರೆ. ದೇಶದ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರದ ಹೊರತು ನಾನು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಯೂನಸ್ ತಿಳಿಸಿರುವುದಾಗಿ ಎನ್‌ಸಿಪಿ ಸಂಚಾಲಕ ಹೇಳಿದರು.
1 Comment