LATEST NEWS
ಮದುವೆ ಮನೆಯಿಂದಲೇ ನವವಧು ಪರಾರಿ : ಲವ್ ಜಿಹಾದ್ ಶಂಕೆ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಮದುವೆ ಮನೆಯಿಂದಲೇ ನವವಧು ಪರಾರಿ : ಲವ್ ಜಿಹಾದ್ ಶಂಕೆ
ಮಂಗಳೂರು,ಡಿಸೆಂಬರ್ 10:ಮದುವೆ ಮನೆಯಿಂದಲೇ ನವ ವಧು ಪರಾರಿಯಾಗಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮೂಡಬಿದರೆಯಲ್ಲಿ ಈ ವಿದ್ಯಮಾನ ಸಂಭವಿಸಿದೆ. ಇಲ್ಲಿನ ದರೆಗುಡ್ಡೆ ನಿವಾಸಿ ಪ್ರೀಯಾಂಕ ಗೆ ವಿದೇಶದಲ್ಲಿ ನೌಕರಿ ,ಮಾಡುವ ಯುವಕನ ಜೊತೆ ಮದುವೆ ನಿಶ್ಚಯ ವಾಗಿತ್ತು.
ಅದರೆ ನವವಧು ಪ್ರಿಯಾಂಕ ಮಾತ್ರ ಮದುವೆ ಮನೆಯಿಂದ ಪರಾರಿಯಾಗಿದ್ದಾಳೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಡಿಸೆಂಬರ್11ಕ್ಕೆ ಹಸೆಮಣೆಗೆ ಏರಬೇಕಾಗಿದ್ದ ನವವಧು ರಾತ್ರಿ ಮನೆಯಿಂದಲೇ ಪರಾರಿಯಾಗಿದ್ದಾಳೆ.
ತಾನು ಪರಾರಿಯಾಗುವಾಗ ದರೆಗುಡ್ಡೆಯಲ್ಲಿರುವ ತನ್ನ ಮನೆಯಿಂದ 10 ಪವನ್ ಚಿನ್ನಾಭರಣ, ಪಾಸ್ ಪೋರ್ಟ್, ಆಧಾರ್ ಕಾರ್ಡ್,ಇತರ ವಸ್ತುಗಳನ್ನು ತನ್ನೊಂದಿಗೆ ಒಯ್ದಿದ್ದಾಳೆ.
ಹಠತ್ ನವವಧು ಪ್ರಿಯಾಂಕ ಪರಾರಿಯಿಂದಾಗಿ ಮನೆ ಮಂದಿ ಕಂಗಾಲಾಗಿದ್ದಾರೆ.
ತಂದೆ ಇಲ್ಲದ ಮಗಳನ್ನು ತಾಯಿ ಕಷ್ಟಪಟ್ಟು ಸಾಕಿದ್ದು ಈಗ ಮಗಳೇ ಮರ್ಯಾದೆಯನ್ನು ಹರಾಜು ಹಾಕಿ ಹೋಗಿರೋದು ತಾಯಿಯ ಹಾಗೂ ಕೌಟುಂಬಿಕರ ನೆಮ್ಮದಿ ಯನ್ನೂ ಕೆಡಿಸಿದೆ. ಪ್ರಿಯಾಂಕ ಪರಾರಿಗೆ ಇದೀಗ ಲೌವ್ ಜಿಹಾದ್ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಪುಷ್ಟಿಯಾಗಿ ಪ್ರೀಯಾಂಕ ಕೆಲ ತಿಂಗಳ ಹಿಂದೆಯಿಂದ ಪರಂಗಿಪೇಟೆಯ ಹೈದರ್ ಎಂಬಾತನ ಜೊತೆ ನಿಕಟ ಸಂಪರ್ಕ ಹೊಂದಿದ್ದಳು.
ಈ ಹಿನ್ನೆಲೆಯಲ್ಲಿ ಅವಳು ಆತನೊಂದಿಗೆ ಓಡಿ ಹೋಗಿ ಮತಾಂತರವಾಗಿರಬಹುದು ಎಂದೂ ಶಂಕಿಸಲಾಗಿದೆ.
ಮೂಡಬಿದ್ರೆ ಠಾಣೆಯಲ್ಲಿ ವಧು ಪರಾರಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಹಿಂದೂ ಸಂಘಟನೆಗಳು ಪ್ರತಿಭಟನೆಯ ಸಿದ್ದತೆಗಳನ್ನು ಮಾಡುತ್ತಿದ್ದಾರೆ.