Connect with us

    LATEST NEWS

    WWE ಖ್ಯಾತಿಯ ಗ್ರೇಟ್‌ ಖಲಿ ಟೋಲ್‌ ಸಿಬ್ಬಂದಿ ಜೊತೆ ಗಲಾಟೆ- ವಿಡಿಯೋ ವೈರಲ್

    ಪಂಜಾಬ್‌, ಜುಲೈ 12: ಪಂಜಾಬ್‌ನ ಲುಧಿಯಾನದ ಟೋಲ್ ಪ್ಲಾಜಾದ ಸಿಬ್ಬಂದಿಯೊಂದಿಗೆ ‘ದಿ ಗ್ರೇಟ್ ಖಲಿ’ ಎಂದೇ ಖ್ಯಾತರಾಗಿರುವ WWE ಕುಸ್ತಿಪಟು ದಲೀಪ್ ಸಿಂಗ್ ರಾಣಾ ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಖಲಿ ತನ್ನ ಕಾರಿನಲ್ಲಿ ಲುಧಿಯಾನ ಮೂಲಕ ಕರ್ನಾಲ್‌ಗೆ ಪ್ರಯಾಣಿಸುತ್ತಿದ್ದಾಗ ಪಾಣಿಪತ್-ಜಲಂಧರ್ ರಾಷ್ಟ್ರೀಯ ಹೆದ್ದಾರಿಯ ಲಾಧೋವಲ್‌ನಲ್ಲಿ ಈ ಘಟನೆ ನಡೆದಿದೆ. ಐಡಿ ಕಾರ್ಡ್‌ ತೋರಿಸುವಂತೆ ಕೇಳಿದಾಗ ತಮ್ಮ ಸಹೋದ್ಯೋಗಿಯೊಬ್ಬರಿಗೆ ಕುಸ್ತಿಪಟು ಕಪಾಳಮೋಕ್ಷ ಮಾಡಿದ್ದಾರೆ ಎಂದು ಟೋಲ್ ಪ್ಲಾಜಾ ಸಿಬ್ಬಂದಿ ಆರೋಪಿಸಿದ್ದಾರೆ.

    ನಮ್ಮ ಸಿಬ್ಬಂದಿ ಕ್ಯಾಮೆರಾದಲ್ಲಿ ಘಟನೆಯನ್ನು ರೆಕಾರ್ಡ್ ಮಾಡುವಾಗ, ಖಲಿ ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ಖಲಿ ಅವರು ಟೋಲ್‌ನ ಗೇಟ್‌ ತೆಗೆಯುವಂತೆ ಧಮ್ಕಿ ಹಾಕಿದ್ದಾರೆ. ನಮ್ಮ ಸಿಬ್ಬಂದಿಗೆ ಬ್ಲ್ಯಾಕ್‌ಮೇಲ್‌ ಕೂಡ ಮಾಡಿದ್ದಾರೆ ಎಂದು ದೂರಿದ್ದಾರೆ. ಗಲಾಟೆ ಸಂಬಂಧದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    https://twitter.com/PranjalmishraIN/status/1546782933830488064?ref_src=twsrc%5Etfw%7Ctwcamp%5Etweetembed%7Ctwterm%5E1546782933830488064%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fwwe-wrestler-great-khali-toll-plaza-staff-clash-video-goes-viral%2F

    ಆರೋಪದ ಕುರಿತು ಪ್ರತಿಕ್ರಿಯಿಸಿರುವ ಖಲಿ, ಪಂಜಾಬ್‌ನ ಫಿಲ್ಲೌರ್‌ನ ಟೋಲ್ ಸಿಬ್ಬಂದಿ ನನ್ನ ಕಾರನ್ನು ನಿಲ್ಲಿಸಿ ಸೆಲ್ಫಿಗಾಗಿ ಅನುಚಿತವಾಗಿ ವರ್ತಿಸಿದರು. ನಾನು ಸೆಲ್ಫಿಯನ್ನು ನಿರಾಕರಿಸಿದಾಗ ಅವರು ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply