DAKSHINA KANNADA
ಉಪ್ಪಿನಂಗಡಿಯಲ್ಲಿ ಮಳೆಹಾನಿ ಪರಿಶೀಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪುತ್ತೂರು, ಜುಲೈ 12: ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಭೇಟಿ ನೀಡಿದ್ದಾರೆ.
ನೇತ್ರಾವತಿ ಮತ್ತು ಕುಮಾರಧಾರಾ ನದಿ ನೀರನ ಮಟ್ಟ ಪರಿಶೀಲಿಸಿದ ಮುಖ್ಯಮಂತ್ರಿಗಳು ಪ್ರವಾಹದಿಂದ ಉಂಟಾದ ಬೆಳೆಹಾನಿ ಪರಿಶೀಲಿಸಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಮುಖ್ಯಮಂತ್ರಿಗಳಿಗೆ ನೆರೆ ಪರಿಸ್ಥಿತಿ ವಿವರಿಸಿದರು.
ನೆರೆ ನೀರಿನಿಂದಾಗಿ ಕಳೆದ ಒಂದು ವಾರದಿಂದ ಮುಳುಗಡೆಯಾಗಿರುವ ತೋಟಗಳನ್ನು ಮುಖ್ಯಮಂತ್ರಿ ವೀಕ್ಷಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಸುನಿಲ್ ಕುಮಾರ್, ಎಸ್.ಅಂಗಾರ,ಸಿ.ಸಿ.ಪಾಟೀಲ, ಆರ್ ಆಶೋಕ್ ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದ್ದಾರೆ.
You must be logged in to post a comment Login