Connect with us

    LATEST NEWS

    ಸ್ಥಿತಿವಂತರಾಗಿದ್ರೆ ಅನುಕಂಪದ ನೌಕರಿಯಿಲ್ಲ – ಹೊಸ ಮಾರ್ಗಸೂಚಿಯಲ್ಲಿ ಏನಿದೆ?

    ನವದೆಹಲಿ, ಜುಲೈ 13: ಸರ್ಕಾರಿ ಉದ್ಯೋಗದಲ್ಲಿದ್ದು ಸೇವೆಯಲ್ಲಿರುವಾಗ ಆಕಸ್ಮಿಕವಾಗಿ ಮೃತಪಟ್ಟರೆ ಅಥವಾ ವೈದ್ಯಕೀಯ ಕಾರಣಗಳಿಂದ ನಿವೃತ್ತಿ ಹೊಂದುವ ತನ್ನ ಉದ್ಯೋಗಿಗಳನ್ನು ಅವಲಂಬಿಸಿದ ಕುಟುಂಬದವರಿಗೆ ಅನುಕಂಪದ ನೌಕರಿ ನೀಡುವ ನೀತಿಯಲ್ಲಿ ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಪಾಡುಗಳನ್ನು ತಂದಿದೆ.

    ಹೊಸ ಮಾರ್ಗಸೂಚಿಗಳು ನೌಕರಿಯ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ವಸ್ತುನಿಷ್ಠತೆ ಹೊಂದಿದೆ. ಹಾಗಾಗಿ ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಆರ್ಥಿಕವಾಗಿ ಹಿಂದುಳಿದ ನೌಕರನ ಕುಟುಂಬಕ್ಕೆ ತುರ್ತು ನೆರವು ನೀಡಲು ಅನುಕಂಪ ಆಧಾರಿತ ನೌಕರಿ ನೀಡಲಾಗುತ್ತದೆ ಒಂದು ವೇಳೆ ಕುಟುಂಬದಲ್ಲಿ ಆರ್ಥಿಕ ಸ್ಥಿತಿವಂತರಿದ್ದರೆ ಅವರಿಗೆ ಅನುಕಂಪದ ನೌಕರಿ ಸಿಗುವ ಸಾಧ್ಯತೆಗಳಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೊಸ ಮಾರ್ಗಸೂಚಿಗಳು ಕುಟುಂಬದ ಆರ್ಥಿಕ ಸ್ಥಿತಿಯ ಸಮಗ್ರ ಮೌಲ್ಯಮಾಪನ, ಆ ಕುಟುಂಬದಲ್ಲಿ ಉದ್ಯೋಗ ಮಾಡುತ್ತಿರುವವರ ಸಂಖ್ಯೆ, ಕುಟುಂಬದ ಗಾತ್ರ, ಮಕ್ಕಳ ವಯಸ್ಸು ಮತ್ತು ಕುಟುಂಬದ ಆರ್ಥಿಕ ಸ್ಥಿತಿಯ ಅಗತ್ಯತೆಗಳನ್ನು ಒಟ್ಟಾರೆಯಾಗಿ ಪರಿಗಣಿಸುವ ಅಂಶಗಳನ್ನು ಒಳಗೊಂಡಿದೆ.

    ಈ ಯೋಜನೆಯಲ್ಲಿ ಅನುಕಂಪದ ಆಧರಿತ ಉದ್ಯೋಗದ ಅರ್ಜಿಯನ್ನು ಮೌಲ್ಯಮಾಪನ ಮಾಡಲು ಗ್ರೇಡ್ ಆಧಾರಿತ ಮೆರಿಟ್ ಸ್ಕೀಂ ಅನ್ನು ಅಳವಡಿಸಲಾಗಿರುತ್ತದೆ. ಅರ್ಜಿದಾರರಿಗೆ ಮೊದಲ ಹಂತದಲ್ಲಿ ವೈಯಕ್ತಿಕವಾಗಿ ಪೂರ್ಣಗೊಳಿಸಬೇಕಾದ ಅವಶ್ಯಕತೆಗಳು ಮತ್ತು ಔಪಚಾರಿಕತೆಗಳ ಬಗ್ಗೆ ಸಲಹೆ ನಿಡಲಾಗುತ್ತದೆ. ನಂತರ ಮೂರು ಅಧಿಕಾರಿಗಳನ್ನೊಳಗೊಂಡ ಸಮಿತಿಯು ಅರ್ಜಿಯನ್ನು ಪರಿಗಣಿಸುತ್ತದೆ. ಒಬ್ಬರು ಅಧ್ಯಕ್ಷರು, ಇಬ್ಬರು ಸದಸ್ಯರು ಸಮಿತಿಯಲ್ಲಿ ಇರುತ್ತಾರೆ. ನಂತರ ಉಪ ಕಾರ್ಯದರ್ಶಿಗಳು ಸಮಿತಿಯ ಶಿಫಾರಸ್ಸಿನ ನಿರ್ಧಾರಕ್ಕಾಗಿ ಅರ್ಜಿಯನ್ನು ಸಕ್ಷಮ ಪ್ರಾಧಿಕಾರ ಮುಂದೆ ಇಡುತ್ತಾರೆ.

    Share Information
    Advertisement
    Click to comment

    You must be logged in to post a comment Login

    Leave a Reply