KARNATAKA
14 ದಿನದ ಪುಟ್ಟ ಕಂದಮ್ಮವಿರುವ ಮಹಿಳೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಮಡಿಕೇರಿ ಫೆಬ್ರವರಿ 14: 14 ದಿನದ ಹುಸುಗೂಸು ಮಗುವನ್ನು ಬಿಟ್ಟು ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿಯಲ್ಲಿ ನಡೆದಿದೆ.
ಮೃತರನ್ನು ವಿರಾಜಪೇಟೆ ಕೊಟ್ಟೋಳಿ ಗ್ರಾಮದ ನಿವಾಸಿ ಎಂ.ಎಂ ದಿನೇಶ್ ಎಂಬುವವರ ಪತ್ನಿ ಕಾವೇರಮ್ಮ (24) ಎಂದು ಗುರುತಿಸಲಾಗಿದೆ. ದಿನೇಶ್-ಕಾವೇರಮ್ಮ ಮದುವೆಯಾಗಿ ಸುಮಾರು 4 ವರ್ಷಗಳು ಕಳೆದಿದೆ. ಫೆಬ್ರವರಿ12 ರಂದು ಪತಿ ದಿನೇಶ್ ತಮ್ಮ ಮನೆಯ ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮನೆಯಲ್ಲಿ ಮಗುವಿನ ಕೂಗಾಟ ಕೇಳಿ ಬಂದು ನೋಡಿದ್ದಾರೆ. ಕಾವೇರಮ್ಮ ಸ್ನಾನದ ಕೋಣೆಯಲ್ಲಿ ಸೀರೆಯಿಂದ ನೇಣುಬಿಗಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)