Connect with us

    LATEST NEWS

    ಚಲಿಸುತ್ತಿದ್ದ ರೈಲಿನಿಂದ ಮಹಿಳೆಯರ ಜಂಪ್..ಬದುಕುಳಿದಿದ್ದೇ ಪವಾಡ….ವೈರಲ್ ವಿಡಿಯೋ

    ಪಶ್ಚಿಮಬಂಗಾಳ: ಚಲಿಸುತ್ತಿದ್ದ ರೈಲಿನಿಂದ ಜಂಪ್ ಮಾಡಿ ಇಳಿಯಲು ಹೋದ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ರೈಲ್ವೆ ಇಲಾಖೆ ತಮ್ಮ ಟ್ವಿಟರ್ ನಲ್ಲಿ ಪ್ರಕಟಿಸಿದ್ದು, ವೇಗವಾಗಿ ಚಲಿಸುತ್ತಿದ್ದ ಸಂತ್ರಗಚಿ-ಆನಂದ್ ವಿಹಾರ್ ಎಕ್ಸ್‌ಪ್ರೆಸ್​ನಿಂದ ರೈಲಿನಿಂದ ಮೊದಲು ಒಬ್ಬ ಮಹಿಳೆ ಜಿಗಿದಿದ್ದು, ರೈಲಿನಿಂದ ಸ್ವಲ್ಪ ಅಂತರದಲ್ಲಿ ಬಿದ್ದಿದ್ದಾರೆ. ಈ ಮಹಿಳೆ ಬೆನ್ನಲ್ಲೆ ಮತ್ತೊಬ್ಬ ಮಹಿಳೆ ಜಿಗಿದಿದ್ದು, ರೈಲಿನ ಹತ್ತಿರದಲ್ಲೇ ಬಿದ್ದಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದು, ಒಂದು ಕ್ಷಣ ಎಲ್ಲರಲ್ಲೂ ಭಯ ಹುಟ್ಟಿಸುವಂತಿದೆ ಈ ವಿಡಿಯೋ


    ರೈಲಿನಿಂದ ಒಮ್ಮೆಲೇ ಜಿಗಿದ ಇಬ್ಬರು ಮಹಿಳೆಯರು ರೈಲಿನ ಅಡಿಗೆ ಬೀಳದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವಿಡಿಯೋದಲ್ಲಿ ಬಂಗಾಳದ ಪುರುಲಿಯಾ ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಯೊಬ್ಬರು ಮಹಿಳೆಯನ್ನು ರೈಲಿಗೆ ಸಿಲುಕುವುದರಿಂದ ತಪ್ಪಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply