Connect with us

    DAKSHINA KANNADA

    ಮನೆ ಜಪ್ತಿ ಮಾಡಲು ಬಂದ ಬ್ಯಾಂಕ್ ಸಿಬ್ಬಂದಿ ಎದುರೆ ನೇಣಿಗೆ ಶರಣಾದ ಮನೆ ಮಾಲೀಕನ ಪತ್ನಿ

    ಪುತ್ತೂರು ಫೆಬ್ರವರಿ 18:  ಮಾಡಿದ್ದ ಸಾಲ ತೀರಿಸಲಾಗಿದೆ ಮನೆ ಮುಟ್ಟಗೋಲು ಹಾಕಲು ಬಂದ ರಾಷ್ಟ್ರೀಕೃತ ಬ್ಯಾಂಕ್ ನ ಸಿಬ್ಬಂದಿಗಳ ಮುಂದೆಯೇ ಮನೆ ಮಾಲಿಕನ ಪತ್ನಿ ಆತ್ನಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಹಾರಾಡಿ ರೈಲ್ವೇ ರಸ್ತೆಯ ಬಳಿ ನಡೆದಿದೆ.
    ಪುತ್ತೂರಿನ ಉದ್ಯಮಿ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆ ನಿವಾಸಿ ರಘುವೀರ್ ಪ್ರಭು ಅವರ ಪತ್ನಿ ಪ್ರಾರ್ಥನಾ ಪ್ರಭು (52)ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ‘ನನ್ನ ಸಾವಿಗೆ ಕೆನರಾ ಬ್ಯಾಂಕ್‌ನವರ ಉಪದ್ರವ, ಮೆಂಟಲ್ ಟಾರ್ಚರ್ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಅವರು ಮನೆಯ ಕೊಠಡಿಯೊಂದರಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


    ರಘುವೀರ ಪ್ರಭು ಅವರು ಕೆನರಾ ಬ್ಯಾಂಕ್‌ನಲ್ಲಿ ಹೊಂದಿದ್ದ ಸಾಲದ ಬಾಬ್ತು ಮಂಗಳೂರಿನ ಕೆನಾರಾ ಬ್ಯಾಂಕ್ ಕೋರ್ಟು ಆದೇಶದೊಂದಿಗೆ ಮನೆ ಮುಟ್ಟುಗೋಲು ಹಾಕಲು ಇಂದು ಹಾರಾಡಿಯಲ್ಲಿರುವ ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲಿದ್ದ ರಘುವೀರ ಪ್ರಭು ಅವರ ಪತ್ನಿ ಪ್ರಾರ್ಥನಾ ಮತ್ತು ಇಬ್ಬರು ಮಕ್ಕಳು ಆತಂಕಗೊಂಡಿದ್ದರು.

    ರಘುವೀರ ಪ್ರಭು ಅವರ ಮಕ್ಕಳು ಪ್ರಕರಣ ನ್ಯಾಯಾಲಯದಲ್ಲಿರುವಾಗ ಮುಟ್ಟುಗೋಲು ಹಾಕದಂತೆ ಬ್ಯಾಂಕ್ ಮತ್ತು ಕೋರ್ಟು ಕಮೀಷನರ್ ಅಧಿಕಾರಿಗಳೊಂದಿಗೆ ವಿನಂತಿಸಿದ್ದಾರೆನ್ನಲಾಗಿದೆ. ಇದನ್ನು ತಿರಸ್ಕರಿಸಿದ ಬ್ಯಾಂಕ್‌ನವರು ಮನೆಯ ಹಿಂಬದಿಯ ಬೀಗವನ್ನು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ಇದೇ ಕ್ಷಣದಲ್ಲಿ ಮನೆಯೊಳಗಿದ್ದ ಪ್ರಾರ್ಥನಾ ಪ್ರಭು ಅವರು ಮನೆಯೊಳಗಿನಿಂದ ಲಾಕ್ ಮಾಡಿ ಕೊಠಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


    ಬ್ಯಾಂಕ್ ಮುಟ್ಟುಗೋಲಿಗೆ ಭದ್ರತೆ ಒದಗಿಸಲು ಬಂದ ಪೊಲೀಸರು ನೇಣು ಬಿಗಿದ ಸ್ಥಿತಿಯಲ್ಲಿದ್ದ ಪ್ರಾರ್ಥನಾ ಪ್ರಭು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು. ಬಳಿಕದ ಬೆಳವಣಿಗೆಯಲ್ಲಿ ಬ್ಯಾಂಕ್‌ನವರು ಮನೆ ಮುಟ್ಟುಗೋಲು ಮಾಡಲೆಂದು ಮನೆಯ ಹಿಂಬದಿಯ ಬಾಗಿಲಿಗೆ ಬೀಗ ಹಾಕಿ ಸೀಲ್ ಹಾಕಿ, ಮನೆಯ ಆವರಣದ ಗೇಟ್ ಬಳಿಯೂ ಮನೆ ಮುಟ್ಟುಗೋಲು ಮಾಡಲಾಗಿದೆ ಎಂಬ ಬ್ಯಾನರ್ ಹಿಡಿದು ಪೊಟೋ ಕ್ಲಿಕಿಸಿದರು.

    ಇದೆ ಸಂದರ್ಭ ಸ್ಥಳಕ್ಕೆ ಆಗಮಿಸಿದ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಜೀವ ಹೋದ ಮೇಲೂ ಮನೆ ಸೀಸ್ ಮಾಡುವುದು ಸರಿಯಲ್ಲ. ಮಾನವೀಯತೆ ಇರಲಿ ಎಂದರು. ಕೊನೆಗೆ ಮನೆಯ ಮಾಲಕ ರಘುವೀರ್ ಪ್ರಭು ಬಂದು ಸಾಲದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ನಡುವೆ ಸಾಲಗಾರನಲ್ಲದ ನನ್ನ ಮಕ್ಕಳಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲು ಬಂದಿರುವುದು ಕಾನೂನು ಬಾಹಿರವಾಗಿದೆ ಎಂದಾಗ ಬ್ಯಾಂಕ್ ಅಧಿಕಾರಿ ಬಂದು ಮನೆ ಸೀಸ್ ಮಾಡಿದ ಕೀ ಅನ್ನು ರಘುವೀರ್ ಅವರ ಮಕ್ಕಳಿಗೆ ಹಸ್ತಾಂತರ ಮಾಡಿ ತೆರಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *