Connect with us

LATEST NEWS

ಸ್ಯಾನಿಟರಿ ನ್ಯಾಪ್ಕಿನ್ ನಲ್ಲಿ ಅಕ್ರಮವಾಗಿ 1 ಕೆಜಿ ಚಿನ್ನ ಸಾಗಿಸಲು ಹೋಗಿ ಸಿಕ್ಕಿ ಬಿದ್ದ ಮಹಿಳೆ

ಮಂಗಳೂರು ಫೆಬ್ರವರಿ 18: ಚಿನ್ನ ಕಳ್ಳ ಸಾಗಾಣಿಕೆಗೆ ಈಗ ಹೊಸ ಹೊಸ ಐಡಿಯಾಗಳನ್ನು ಬಳಸುತ್ತಿರುವ ಸ್ಮಗ್ಲರ್ ಗಳು ಈ ಬಾರಿ ಸಾನಿಟರಿ ನ್ಯಾಪ್ಕಿನ್ ಒಳಗೆ 1 ಕೆಜಿಗೂ ಅಧಿಕ ಚಿನ್ನವನ್ನು ಸಾಗಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ.


ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆ ಸೇರಿದಂತೆ ಇಬ್ಬರನ್ನು ತಪಾಸಣೆ ಮಾಡಿದ ಸಂದರ್ಭ ಸ್ಯಾನಿಟರಿ ನ್ಯಾಪ್ಕಿನ್‌‌ನಲ್ಲಿ ಅಡಗಿಸಿಟ್ಟಿದ್ದ 53.50 ಲಕ್ಷ. ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ.
ಫೆ.11ರಂದು ಭಟ್ಕಳ ಮೂಲದ ಪ್ರಯಾಣಿಕರು ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದ 10 ಲಕ್ಷ. ರೂ ಮೌಲ್ಯದ 0.2 ಕೆಜಿ ಚಿನ್ನವನ್ನು ಕಸ್ಟಮ್ಸ್‌‌‌ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.