Connect with us

    DAKSHINA KANNADA

    ಕ್ಷುಲ್ಲಕ ಕಾರಣಕ್ಕೆ ಮಹಿಳೆಗೆ ಥಳಿತ, ಪ್ರಕರಣ ದಾಖಲಿಸಲು ಪೊಲೀಸರ ಹಿಂದೇಟು

    ಕ್ಷುಲ್ಲಕ ಕಾರಣಕ್ಕೆ ಮಹಿಳೆಗೆ ಥಳಿತ, ಪ್ರಕರಣ ದಾಖಲಿಸಲು ಪೊಲೀಸರ ಹಿಂದೇಟು

    ಪುತ್ತೂರು ಅಗಸ್ಟ್ 6: ದನದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳು ಮಹಿಳೆಯೋರ್ವರಿಗೆ ತೀವೃವಾಗಿ ಥಳಿಸಿದ ಘಟನೆ ಪುತ್ತೂರಿನ ಕಬಕದಲ್ಲಿ ನಡೆದಿದೆ. ಘಟನೆ ನಡೆದು ಎರಡು ದಿನಗಳಾದರೂ ಪುತ್ತೂರು ಪೋಲೀಸರು ಮಾತ್ರ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪ ಇದೀಗ ಸಂತೃಸ್ತ ಮಹಿಳೆಯ ಕುಟುಂಬದ್ದಾಗಿದೆ.

    ಕಬಕದ ಬಳಿಯಿರುವ ರಾಮಣ್ಣ ಗೌಡ ಅವರ ತೋಟಕ್ಕೆ ಅಪರಿಚಿತ ದನಗಳು ಬಂದ ಹಿನ್ನಲೆಯಲ್ಲಿ ರಾಮಣ್ಣ ಗೌಡರ ಪತ್ನಿ ಯೋಗಿನಿ ದನಗಳನ್ನು ತೋಟದಿಂದ ಹೊರಗೆ ಓಡಿಸಿದ್ದಾರೆ. ಆದರೆ ಒಂದು ದನ ಪಕ್ಕದಲ್ಲೇ ಇದ್ದ ಗಿರಿಯಪ್ಪ ಗೌಡ ಎನ್ನುವವರಿಗೆ ಸೇರಿದ ತೋಟಕ್ಕೆ ನುಗ್ಗಿತ್ತು.

    ಇದರಿಂದ ಕುಪಿತಗೊಂಡ ಗಿರಿಯಪ್ಪ ಗೌಡ ಹಾಗೂ ಅವರ ಪತ್ನಿ ಸೇರಿ ಯೋಗಿನಿ ಅವರಿಗೆ ಸಲಾಕೆಯಿಂದ ತಲೆಗೆ ಥಳಿಸಿದ್ದು, ಏಟಿಗೆ ಕೆಳಗಿ ಬಿದ್ದ ಯೋಗಿನಿಯವರಿಗೆ ಗಿರಿಯಪ್ಪ ದಂಪತಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತೀವೃ ಗಾಯಗೊಂಡ ಯೋಗಿನಿಯವರನ್ನು ಘಟನೆ ನಡೆದ ಅಗಸ್ಟ್ 4 ರಂದೇ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು.

    ಈ ಸಂಬಂಧ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಗಿರಿಯಪ್ಪ ಗೌಡ ದಂಪತಿಗಳ ವಿರುದ್ಧ ದೂರನ್ನೂ ನೀಡಲಾಗಿತ್ತು. ಆದರೆ ಘಟನೆ ನಡೆದು ಎರಡು ದಿನಗಳು ಕಳೆದರೂ ಪುತ್ತೂರು ಪೋಲೀಸರು ಮಾತ್ರ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪವನ್ನು ಸಂತೃಸ್ತ ಮಹಿಳೆಯ ಕುಟುಂಬಸ್ಥರು ಮಾಡುತ್ತಿದ್ದಾರೆ.

    ನಗರ ಪೋಲೀಸರು ಸಂತೃಸ್ತ ಮಹಿಳೆಯ ಪತಿ ರಾಮಣ್ಣ ಗೌಡರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಪತ್ನಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸುವಂತೆ ಒತ್ತಡ ಹೇರುತ್ತಿದ್ದಾರೆ. ಆಸ್ಪತ್ರೆಯ ವೈದ್ಯರೇ ತಲೆಗೆ ಗಂಭೀರ ಗಾಯಗಳಾಗಿರುವ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಲಿ ಎನ್ನುವ ನಿರ್ದೇಶನ ನೀಡಿದ್ದಾರೆ.

    ಆದರೆ ಇದೀಗ ಪೋಲೀಸರು ಮಹಿಳೆಯನ್ನು ಡಿಸ್ಚಾರ್ಜ್ ಮಾಡುವಂತೆ ಒತ್ತಾಯಿಸುತ್ತಿದ್ದು, ಪ್ರಕರಣ ದಾಖಲಿಸಿಕೊಳ್ಳಲೂ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪ ಸಂತೃಸ್ತ ಮಹಿಳೆಯ ಕುಟುಂಬಸ್ಥರದ್ದಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply