Connect with us

FILM

6 ತಿಂಗಳಿಗೆ ಮರಿದು ಬಿದ್ದ ಮದುವೆ -ವಿಚ್ಚೇದನ ಘೋಷಿಸಿದ ಮಂಗಳೂರು ಮೂಲದ ಟಾಲಿವುಡ್ ನಟಿ ಎಸ್ತರ್ ನೊರೊನ್ಹಾ

ಮಂಗಳೂರು ಸೆಪ್ಟೆಂಬರ್ 02: ಮಂಗಳೂರು ಮೂಲದ ಖ್ಯಾತ ಟಾಲಿವುಡ್ ನಟಿ ಎಸ್ತೆರ್‌‌ ನೊರೊನ್ಹಾ ಮತ್ತು ನಟ ನೋಯೆಲ್‌ ಸೀನ್‌‌ ವಿಚ್ಛೇದನ ಘೋಷಿಸಿದ್ದಾರೆ. ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಎಸ್ತರ್ ನೊರೊನ್ಹಾ ಕಳೆದ ವರ್ಷವೇ ನಾವು ಪ್ರತ್ಯೇಕವಾಗಿದ್ದೇವೆ. ಬಳಿಕ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಸೋಮವಾರ ವಿಚ್ಛೇದನ ಪಡೆದುಕೊಂಡಿದ್ದು, ನ್ಯಾಯಾಲಯದ ತೀರ್ಮಾನಕ್ಕಾಗಿ ಕಾಯುತ್ತಿದ್ದೇವೆ ಎಂದು ನೋಯೆಲ್‌‌‌ ಸೀನ್‌ ಹಾಗೂ ಎಸ್ತೆರ್‌ ನೊರೊನ್ಹಾ ತಿಳಿಸಿದ್ದಾರೆ.


ಮಂಗಳೂರು ಮೂಲದ ನಟಿ ಎಸ್ತರ್ ನೊರೊನ್ಹಾ ಹಾಗೂ ತೆಲುಗಿನ ನಟ ನೊರೊನ್ಹಾ ಸೀನ್ ಕಳೆದ ವರ್ಷ ಜನವರಿಯಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ 6 ತಿಂಗಳಲ್ಲಿ ಇಬ್ಬರು ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು.
ಈ ವಿಚ್ಛೇದನಕ್ಕೆ ನಮ್ಮಲ್ಲಿನ ಭಿನ್ನಾಭಿಪ್ರಾಯ ಕಾರಣವಾಗಿದ್ದು, ಅಂತಿಮವಾಗಿ ಈ ಸುಂದರವಾದ ಸಂಬಂಧವನ್ನು ನಾವು ಕೊನೆಗೊಳಿಸಲು ನಾವು ನಿರ್ಧರಿಸಿದ್ದೇವೆ. ಈ ವೇಳೆ ಇದಕ್ಕೆ ಬೆಂಬಲ ನೀಡುವಂತೆ ನಾನು ವಿನಂತಿಸಿಕೊಳ್ಳುತ್ತೇನೆ. ಇದು ಯಾವಾಗಲೂ ನನ್ನ ಜೀವನದ ಒಂದು ಸುಂದರವಾದ ಹಂತವಾಗಿದ್ದು, ನಾನು ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ನೋಯೆಲ್‌‌ ಬರೆದುಕೊಂಡಿದ್ದಾರೆ.  ಎಸ್ತೆರ್‌‌ ನೊರೊನ್ಹಾ‌ ಅವರೇ ನಿಮಗೆ ದೇವರು ಒಳಿತು ಮಾಡಲಿ. ನಿಮ್ಮ ಕನಸೆಲ್ಲಾ ನನಸಾಗಲಿ ಎಂದು ನೋಯೆಲ್‌ ತಿಳಿಸಿದ್ದಾರೆ.


ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಎಸ್ತೆರ್‌‌‌ ನೊರೆನ್ಹಾ ಅವರು, ನಾವು ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದೇವೆ. ನಾವೆಲ್ಲರೂ ಮಾನವರಾಗಿದ್ದು, ಪ್ರತಿಯೊಬ್ಬರ ಜೀವನದಲ್ಲಿ ಏರಿತಗಳು ಇದ್ದೇ ಇದೆ.ಅಲ್ಲದೇ, ನಮ್ಮ ಜೀವನದಲ್ಲಿ ಹಲವು ಏರಿಳಿತಗಳನ್ನು ಎದುರಿಸುತ್ತೇವೆ. ಒಂದು ಸಂಬಂಧವನ್ನು ನಿಭಾಯಿಸುವುದು ಎಷ್ಟು ಕಷ್ಟ ಎಂದು ನಮಗೆ ತಿಳಿದಿದೆ. ಈ ಸಮಸ್ಯೆಗಳನ್ನು ನಮಗೆ ಪರಿಹರಿಸಲು ಆಗದೇ ಇದಲ್ಲಿ ನಾವು ತೀರ್ಪಿನ ಮೂಲಕ ಈ ಸಮಸ್ಯೆಗಳಿಗೆ ಪರಿಗಾರ ಕಂಡುಕೊಳ್ಳಬೇಕಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *