Connect with us

LATEST NEWS

ಬಸ್ಸಿನಡಿಗೆ ಬಿದ್ದು 6 ತಿಂಗಳ ಗರ್ಭಿಣಿ ನರ್ಸ್ ಸಾವು

ಕಾಸರಗೋಡು ಸೆಪ್ಟೆಂಬರ್ 02: ಆಸ್ಪತ್ರೆಗೆ ಕೆಲಸಕ್ಕೆ ತೆರಳಲು ಬಸ್ಸು ಹತ್ತುವಾಗ ಆಯತಪ್ಪಿ ಬಸ್ಸಿನ ಅಡಿಗೆ ಬಿದ್ದು ಗರ್ಭಿಣಿ ನರ್ಸ್ ಸಾವನಪ್ಪಿರುವ ಘಟನೆ ಕಾಸರಗೋಡು ಕಣ್ಣೂರಿನ ಪೆರವೂರು ಎಂಬಲ್ಲಿ ನಡೆದಿದೆ.


ಕಣ್ಣೂರು ಆಸ್ಟರ್ ಮಿಮ್ಸ್ ಆಸ್ಪತ್ರೆಯ ನರ್ಸ್ ದಿವ್ಯಾ (27) ಎಂದು ಮೃತಪಟ್ಟವರು. ಇಂದು ಬೆಳಿಗ್ಗೆ ದಿವ್ಯಾ ಆಸ್ಪತ್ರೆಗೆ ತೆರಳಲು ಬಸ್ಸು ಹತ್ತುತ್ತಿದ್ದಾಗ ಈ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ದಿವ್ಯಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಳು. ದಿವ್ಯಾ ಆರು ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ.