LATEST NEWS
ಪಂಪ್ ವೆಲ್ ಪ್ಲೈಓವರ್ ಸರ್ವಿಸ್ ರಸ್ತೆಯಲ್ಲಿ ಪೂಕಳಂ
ಮಂಗಳೂರು ಸೆಪ್ಟೆಂಬರ್ 2: ಒಂದು ಕಾಲದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಪಂಪ್ ವೆಲ್ ಪ್ಲೈಓವರ್ ಈಗ ಮತ್ತೆ ಸುದ್ದಿಯಲ್ಲಿದೆ. ಸತತ 10 ವರ್ಷಗಳ ಕಾಮಗಾರಿ ಬಳಿ ನಿರ್ಮಾಣಗೊಂಡ ಪಂಪ್ ವೆಲ್ ಪ್ಲೈಓವರ್ ಸಮೀಪದ ಸರ್ವಿಸ್ ರಸ್ತೆಯ ಅವ್ಯವಸ್ಥೆ ಈಗ ಮತ್ತೆ ಸುದ್ದಿಯಲ್ಲಿದೆ.
ಪ್ಲೈಓವರ್ ಕಾಮಗಾರಿ ಪೂರ್ಣವಾಗುತ್ತಿದ್ದಂತೆ ತರಾತುರಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗಿದ್ದು, ಅದು ಈ ಬಾರಿಯ ಮಳೆಗೆ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳೇ ಕಾಣ ಸಿಗುತ್ತಿದ್ದು, ವಾಹನ ಸಂಚಾರಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ತುಂಬೆಲ್ಲಾ ಹೊಂಡಗುಂಡಿಗಳಿದ್ದರೂ ಜಿಲ್ಲಾಡಳಿತ ಅದನ್ನು ಸರಿಪಡಿಸುವ ಗೋಜಿಗೆ ಹೋಗದ ಹಿನ್ನಲೆ ಮಹಿಳೆಯೊಬ್ಬರು ವಿಭಿನ್ನ ರೀತಿಯಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.
ಓಣಂ ಹಬ್ಬದ ಸಂದರ್ಭ ಹಿನ್ನಲೆ ರಾಧಿಕಾ ದೀಮಂತ್ ಸುವರ್ಣ ಎನ್ನುವವರು ತಮ್ಮ ಗೆಳತಿಯರೊಂದಿಗೆ ಪಂಪ್ ವೆಲ್ ಪ್ಲೈಓವರ್ ನ ಸರ್ವಿಸ್ ರಸ್ತೆಯ ಗುಂಡಿಗಳನ್ನು ಬಳಸಿ ಓಣಂ ಹಬ್ಬದ ಆಚರಣೆ ಸಂದರ್ಭದಲ್ಲಿ ಹೂವುಗಳಿಂದ ರಚಿಸುವ ಪೂಕಳಂ ನ್ನು ರಸ್ತೆಯ ಮದ್ಯೆ ರಚಿಸಿ ಜಿಲ್ಲಾಡಳಿತ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
Facebook Comments
You may like
-
ಪೂಕಳಂ ನಂತರ ಎಚ್ಚೆತ್ತ ಅಧಿಕಾರಿಗಳು ,ಪಂಪ್ ವೆಲ್ ಪ್ಲೈಓವರ್ ಸರ್ವಿಸ್ ರಸ್ತೆ ಹೊಂಡಕ್ಕೆ ತೆಪೆ
-
ಪಂಪ್ ವೆಲ್ ಮಸೀದಿಗೆ ಸೋಡಾ ಬಾಟಲ್ ಎಸೆದ ದುಷ್ಕರ್ಮಿಗಳು
-
ಒಂದೇ ರಾತ್ರಿ ಮೂರ್ಮೂರು ಕಡೆ ಫ್ಲೆಕ್ಸ್ ; ಸಾವರ್ಕರ್, ಅಬ್ಬಕ್ಕ, ಕೋಟಿ ಚೆನ್ನಯರಿಗೂ ಸಿಗ್ತು ಸ್ಥಾನ !
-
ವೀರ ಸಾವರ್ಕರ್ ಬ್ಯಾನರ್ ಹಾಕಿದವರನ್ನು ಕೂಡಲೇ ಬಂಧಿಸಿ – ಯು.ಟಿ ಖಾದರ್
-
ಮಂಗಳೂರು ಪಂಪ್ ವೆಲ್ ಪ್ಲೈಓವರ್ ಗೆ ವೀರ ಸಾವರ್ಕರ್ ಹೆಸರು…!!
-
ಪಂಪ್ ವೆಲ್ ಪ್ಲೈಓವರ್ ನಲ್ಲಿ ಭೀಕರ ರಸ್ತೆ ಅಪಘಾತ
You must be logged in to post a comment Login