ಟೀಮ್ ಆಯ್ಕೆ ಸಂದರ್ಭದಲ್ಲಿ ಕೆಲ ಆಟಗಾರರಿಗೆ ನೋವಾಗುವುದು ಸಹಜ – ರಾಹುಲ್ ದ್ರಾವಿಡ್

ಉಡುಪಿ ಎಪ್ರಿಲ್ 23 ಮುಂದಿನ ವಿಶ್ವಕಪ್ ನ್ನು ಭಾರತ ಗೆಲ್ಲಲಿದೆ ಎಂದು ಭಾರತ ಕ್ರಿಕೆಟ್ ಟೀಮ್ ನ ಮಾಜಿ ನಾಯಕ ಗೋಡೆ ಖ್ಯಾತಿಯ ರಾಹುಲ್ ದ್ರಾವಿಢ್ ಭವಿಷ್ಯ ನುಡಿದಿದ್ದಾರೆ.

ಉಡುಪಿಯ ಮಣಿಪಾಲದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತವರಿನಲ್ಲಿ ಇಂಗ್ಲೆಂಡ್ ಬಲಿಷ್ಟ ತಂಡವಾಗಿದೆ‌. ಇಂಗ್ಲೆಂಡ್ ಜೊತೆ ಆಸ್ಟೇಲಿಯಾ,ಭಾರತಕ್ಕೆ ಫೈನಲ್ ಬರುವ ಅರ್ಹತೆ ಇದೆ. ಭಾರತ ವಿಶ್ವಕಪ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಲ್ಕನೇ ಕ್ರಮಾಂಕದ ಆಟಗಾರರ ಆಯ್ಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಆಟಗಾರರನ್ನು ಆಯ್ಕೆ ಮಾಡುವುದು ಆಯ್ಕೆ ಸಮಿತಿಗೆ ಬಿಟ್ಟ ವಿಚಾರ. ರಾಯಡು, ಪಂತ್, ಅಜಿಂಕೆ ರಹಾನೆ, ಪಾಂಡೆ ಹೀಗೆ ಉತ್ತಮ ಆಟಗಾರರಿದ್ದಾರೆ.

ಆದರೆ ತಂಡದ ಸಮತೋಲನಕ್ಕಾಗಿ ಆಯ್ಕೆ ಸಮಿತಿ ಕೂಲಂಕುಶವಾಗಿ ಪರಿಶೀಲಿಸಿ ತಂಡದ ಆಯ್ಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಕೆಲವು ಆಟಗಾರರಿಗೆ ನೋವಾಗುವುದು ಸಹಜ. ಆದರೆ 15 ಮಂದಿಯನ್ನ ಮಾತ್ರ ಆಯ್ಕೆ ಸಾದ್ಯ ಎಂದು ಹೇಳಿದರು.