ಕರ್ನಾಟಕದ ಸರಳ ಸುಂದರಿ ಜೊತೆ ಸರಳವಾದ ಮಾತುಕತೆ

ಮಂಗಳೂರು ಎಪ್ರಿಲ್ 23: ಈಕೆ ನೋಡೋಕೆ ಡಬ್ಬಲ್ ಎಕ್ಸೆಲ್ ಸೈಜ್, ವಾಯ್ಸ್ ಅಂತೂ ತುಂಬಾ ಕ್ಯೂಟ್.. ಆ್ಯಕ್ಟಿಂಗ್ ವಿಷ್ಯಕ್ಕೆ ಬಂದ್ರೆ ಎರಡು ಮಾತಿಲ್ಲ. ಎಸ್.. ಸ್ಯಾಂಡಲ್ ವುಡ್ ಗೆ ‘ಡುಮ್ಮಿ ಸರಳಾ’ ಆಗಿ ಪರಿಚಯಗೊಂಡವರೇ, ನಟಿ ಶೈಲಾಶ್ರೀ ಮೂಲ್ಕಿ. ಯಾರಿದು ಶೈಲಾಶ್ರೀ ಅಂತೀರಾ..

ಕಳೆದ ಎರಡು ವರ್ಷಗಳ ಹಿಂದೆ ಅದ್ಧೂರಿ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆದ ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಖ್ಯಾತಿಯ ನಟಿ. ಹೀರೋಯಿನ್ ಅಂದ್ಮೆಲೇ ತೆಳ್ಳಗೆ-ಬೆಳ್ಳಗೆ ಗ್ಲ್ಯಾಮರಸ್ ಆಗಿರ್ಬೇಕು ಅನ್ನೋದಕ್ಕೆ ತದ್ವಿರುದ್ದ ನಮ್ಮ ಶೈಲಾಶ್ರೀ.. ಮಾತಿಗೆ ಶುರು ಹಚ್ಚಿಕೊಂಡ್ರೆ ನಾನ್ ಸ್ಟಾಪ್.

ಹಲವಾರು ಶಾರ್ಟ್ ಫಿಲ್ಮ್ ಮಾಡಿರುವ ನಟಿ ಶೈಲಾಶ್ರೀ ಇತ್ತೀಚೆಗೆ ‘ಮಂಗಳೂರು ಮಿರರ್’ನ, ‘ಮಿರರ್ ಇಮೇಜ್’ ಜೊತೆಗೆ ಮಾತಿಗೆ ಸಿಕ್ಕಾಗ, ತಮ್ಮ ಬತ್ತಳಿಕೆಯಿಂದ ಹಲವಾರು ಸಿಹಿ-ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಡಬ್ಬಲ್ ಎಕ್ಸೆಲ್ ಸೈಕ್ ಆದ್ರೂನೂ, ತಿನ್ನೋದು ಬಿಡೋದಿಲ್ಲಾ ಅಂತಾ, ಸಿಕ್ಕಾಪಟ್ಟೆ ತಿಂಡಿಪೋತಿಯಾಗಿರೋ ಶೈಲಾಶ್ರೀಯ ಅನುಭವಗಳ ಮೂಟೆ ಇಲ್ಲಿದೆ ನೋಡಿ..

VIDEO