Connect with us

KARNATAKA

ಕುಮಾರಸ್ವಾಮಿ ವೈಯುಕ್ತಿಕ ವಿಚಾರ ಪ್ರಸ್ತಾಪ ಮಾಡಿದರೆ ಹುಷಾರ್ – ಎಂಎಲ್ಸಿ ಭೋಜೇಗೌಡ

ಕುಮಾರಸ್ವಾಮಿ ವೈಯುಕ್ತಿಕ ವಿಚಾರ ಪ್ರಸ್ತಾಪ ಮಾಡಿದರೆ ಹುಷಾರ್ – ಎಂಎಲ್ಸಿ ಭೋಜೇಗೌಡ

ಉಡುಪಿ ಅಕ್ಟೋಬರ್ 30: ಮುಖ್ಯಮಂತ್ರಿಯ ಕುಮಾರಸ್ವಾಮಿ ಯವರ ವೈಯುಕ್ತಿಕ ವಿಚಾರ ಪ್ರಸ್ತಾಪ ಮಾಡಿದ್ರೆ ಹುಷಾರ್, ನಿಮ್ಮ ವೈಯುಕ್ತಿಕ ವಿಚಾರ ತೆಗಿಯಬೇಕಾಗುತ್ತೆ ಎಂದು ಕುಮಾರ ಬಂಗಾರಪ್ಪಗೆ ಭೋಜೇಗೌಡ ಸವಾಲು ಹಾಕಿದ್ದಾರೆ.

ಕುಮಾರ ಬಂಗಾರಪ್ಪ ಅವರ ಮಿಟೂ ಹೇಳಿಕೆ ಅವರ ಸಣ್ಣತನ ತೋರಿಸುತ್ತಿದೆ. ಜವಾಬ್ದಾರಿ ಇರುವ ಮನುಷ್ಯ ಮಾಜಿ ಸಿಎಂ ಮಗ ಆಗಿ ಹೀಗೆ ಮಾತನಾಡಿದ್ದು, ಮುಖ್ಯಮಂತ್ರಿಯ ಕುಮಾರಸ್ವಾಮಿಯವರ ವೈಯುಕ್ತಿಕ ವಿಚಾರ ಪ್ರಸ್ತಾಪ ಮಾಡಿದ್ರೆ ಹುಷಾರ್, ನಿಮ್ಮ ವೈಯುಕ್ತಿಕ ವಿಚಾರ ತೆಗಿಯಬೇಕಾಗುತ್ತೆ ಎಂದು ಕುಮಾರ ಬಂಗಾರಪ್ಪ ಗೆ ಭೋಜೇಗೌಡ ಸವಾಲು ಹಾಕಿದ್ದಾರೆ.

ನಾವು ಅಂತ ಕೀಳುಮಟ್ಟದ ರಾಜಕೀಯ ಮಾಡಲ್ಲ, ಆ ಥರ ಮೀಟು ಇದ್ರೆ ನೊಂದವರು ಬಂದು ಹೇಳ್ತಾರೆ. ಇವರಿಗ್ಯಾಕೆ ಅವರ ಉಸಾಬರಿ, ನಿಮಗಿಂತ ಸಣ್ಣತನ ತೋರುವ ಶಕ್ತಿ ನನಗಿದೆ. ದಾಖಲೆ ಇದ್ದರೆ ನ್ಯಾಯಾಲಯ ಇದೆ, ವೈಯ್ಯಕ್ತಿಕ ವಿಚಾರ ಚುನಾವಣೆಗೆ ಬಳಸೋದು ಅಕ್ಷಮ್ಯ ಅಪರಾಧ.

ಬಂಗಾರಪ್ಪ ನಮ್ಮ ಪಕ್ಷದಲ್ಲಿದ್ರು, ಅವರ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ರೆ ಏನು ತಪ್ಪು, ಕುಮಾರಸ್ವಾಮಿ ಅವರಿಗೆ ಎಲ್ಲಾ ಅಧಿಕಾರ ಇದೆ ಎಂದು ಹೇಳಿದರು.