Connect with us

    LATEST NEWS

    100 ಪದಕಗಳನ್ನು ಬಾಚಿಕೊಂಡ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್

    100 ಪದಕಗಳನ್ನು ಬಾಚಿಕೊಂಡ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್

    ಮಂಗಳೂರು ಅಕ್ಟೋಬರ್ 30: ಸ್ಪೀಡ್ ರೋಲರ್ ಸ್ಕೇಟಿಂಗ್ ಜಿಲ್ಲಾ ಆಯ್ಕೆ ಪ್ರಕ್ರಿಯೆ ಮತ್ತು ಚಾಂಪಿಯನ್ ಶಿಪ್ -2018-19 ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಶನಿವಾರ ಹಾಗೂ ರವಿವಾರ ನಡೆಯಿತು.

    ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 8 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 77 ಪದಕಗಳನ್ನು ಮತ್ತು 8 ವರ್ಷ ಕೆಳಗಿನ ವಿಭಾಗದಲ್ಲಿ 23 ಪದಕಗಳನ್ನು ಹೈ ಫ್ಲೈಯರ್ಸ್ ಕ್ಲಬ್ ಗಳಿಸಿತು. ಈ ಮೂಲಕ ಚಿನ್ನ, ಬೆಳ್ಳಿ ಮತ್ತು ಕಂಚಿನ ಒಟ್ಟು 100 ಪದಕಗಳನ್ನು ಕ್ಲಬ್ ತನ್ನದಾಗಿಸಿಕೊಂಡಿತು.

    8 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 37 ಸ್ಕೇಟರ್ ಗಳು ಭಾಗವಹಿಸಿದ್ದು, 22 ಮಂದಿ ನವೆಂಬರ್ ನಲ್ಲಿ ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಗೆ ತೇರ್ಗಡೆ ಹೊಂದಿದ್ದಾರೆ. 8 ವರ್ಷ ಕೆಳಗಿನ ವಿಭಾಗದಲ್ಲಿ 15 ಸ್ಕೇಟರ್ ಗಳು ಭಾಗವಹಿಸಿದ್ದರು.
    ಪದಕ ವಿಜೇತ ಸ್ಕೇಟರ್ ಗಳೆಲ್ಲರೂ ಕೋಚ್ ಮೋಹನ್ ದಾಸ್ ಮತ್ತು ಜಯರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

    ಸ್ಪರ್ಧಾಳುಗಳ ಪೈಕಿ ಡೇನಿಯಲ್ ಕೊನ್ಸೆಸ್ಸೋ, ಖುಷಿರಾಣಿ, ಸುಹಾನ್ ರಾಜ್, ತಲಾ 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ವಿವೇಕ್ ಯೋಗರಾಜ್, ದೀಯಾ ದಾಸ್ , ಮೋಕ್ಷಾ ಸುವರ್ಣ, ತನ್ಮಯ್ ಕೊಟ್ಟಾರಿ, ಮೊಹಮ್ಮದ್ ಶಮಿಲ್ ಅರ್ಶಾದ್, ಕೃತಿ ಕಯ್ಯ, ಸ್ವಸ್ತಿ ಶ್ರೀ ಶೆಟ್ಟಿ, ವಿಹಾನ್ ಸುವರ್ಣ, ನಿಹಾರಿಕಾ ಟಿ. ತಲಾ 3 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

    ಡೇಶಿಯಲ್ ಕಾನ್ಸೆಸ್ಸೋ ಮೂರು ಚಿನ್ನ 1 ಬೆಳ್ಳಿ, ರಚಿತ್ ಡಿಸೋಜ 2 ಚಿನ್ನ 2 ಬೆಳ್ಳಿ, ಅರ್ಪಿತಾ ಶೇಟ್ 1 ಚಿನ್ನ ಮೂರು ಬೆಳ್ಳಿ, ರುಷಭ್ ಮಂಜೇಶ್ವರ 1 ಚಿನ್ನ 2 ಬೆಳ್ಳಿ, ಫರಾಝ್ ಫರೀದ್ 3 ಬೆಳ್ಳಿ, ಅನಘಾ ರಾಜೇಶ್ 3 ಬೆಳ್ಳಿ, ಶಹಾನ್ ಮಹಮ್ಮದ್ 2 ಬೆಳ್ಳಿ 1 ಕಂಚು, ಮಯಾನ್ ಸಿಕ್ವೇರಾ 2 ಬೆಳ್ಳಿ 1 ಕಂಚು, ಶಮಿತ್ ಶೆಟ್ಟಿ 2 ಬೆಳ್ಳಿ, ಅದ್ವಿಕಾ ಶೆಟ್ಟಿ 1 ಬೆಳ್ಳಿ 2 ಕಂಚು, ಶಹೀಮ್ ಮೊಹಮ್ಮದ್ 2 ಕಂಚು, ನಿರ್ಮಾಯ್ ವೈ.ಎನ್. 1 ಕಂಚು, ಅದ್ವಿಕ್ ಶೆಟ್ಟಿ 1 ಕಂಚು, ಫರಾಝ್ 1ಚಿನ್ನ,ರಿಷನ್ ನಝರೇತ್ 1 ಕಂಚಿನ ಪದಕ ಪಡೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply