DAKSHINA KANNADA
ವಿಟ್ಲ – ವಿವಾಹಿತ ಮಹಿಳೆ ನಾಪತ್ತೆ….!!
ವಿಟ್ಲ ನವೆಂಬರ್ 1: ವಿವಾಹಿತ ಮಹಿಳೆಯೊಬ್ಬಳು ಅಕ್ಟೋಬರ್ 29 ರಿಂದ ನಾಪತ್ತೆಯಾಗಿದ್ದಾರೆ ಎಂದು ಆಕೆಯ ಮನೆಯವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ವಿಟ್ಲಪಟ್ನೂರು ಗ್ರಾಮದ ಕಡಂಬು ನಿವಾಸಿ ಕವಿತಾ (29) ಕಾಣೆಯಾದವರು. ಕೆಲಸ ಮುಗಿಸಿ, ಸಂಜೆ ತಾಯಿ ಮನೆಗೆ ಹೋಗುತ್ತೇನೆಂದು ಬೆಳಗ್ಗೆ ಮನೆಯಲ್ಲಿ ಹೇಳಿದ್ದರು. ಆದರೆ ಆಕೆ ತಾಯಿ ಮನೆಗೆ ತೆರಳಲಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪರಿಸರದಲ್ಲಿ ಹುಡುಕಾಡಿದರೂ ಕವಿತಾ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
You must be logged in to post a comment Login