FILM
ತಮಿಳು ನಟ ವಿಶಾಲ್ ಅನಾರೋಗ್ಯದ ಬಗ್ಗೆ ನಟಿ ಖುಷ್ಬೂ ಹೇಳಿದ್ದೇನು
ತಮಿಳುನಾಡು ಜನವರಿ 08: ತಮಿಳು ಸ್ಟಾರ್ ವಿಶಾಲ್ ಆರೋಗ್ಯದ ಬಗ್ಗೆ ಇದೀಗ ನಟಿ ಖುಷ್ಪೂ ಮಾಹಿತಿ ನೀಡಿದ್ದು, ವಿಶಾಲ್ ಜ್ವರದಿಂದ ಬಳಲುತ್ತಿದ್ದ ಕಾರಣ ಅವರ ಕೈ ಅಲುಗಾಡುತ್ತಿತ್ತು ಎಂದು ಹೇಳಿದ್ದಾರೆ.
ವಿಶಾಲ್ ಅವರು ನಟಿಸಿರುವ ಮದಗಜರಾದ ಸಿನೆಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ವಿಶಾಲ್ ಅವರು ಅನಾರೋಗ್ಯದಿಂದ ಇರುವ ವಿಡಿಯೋ ವೈರಲ್ ಆಗಿತ್ತು, ನಟ ವಿಶಾಲ್ ನಡೆದಾಡಲು ಕಷ್ಟಪಡುತ್ತಿದ್ದು, ನಡುಗುತ್ತಿರುವ ಕೈ ಹಾಗೂ ಮಾತನಾಡಲು ಕಷ್ಟಪಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿಶಾಲ್ ಅವರ ಅಭಿಮಾನಿಗಳು ಆತಂಕದಲ್ಲಿದ್ದರು, ಅಲ್ಲದೆ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಾಸಿಫ್ ಸುದ್ದಿಗಳು ಹರಿದಾಡಿದ್ದವು.
ಇದೀಗ ಈ ಬಗ್ಗೆ ನಟಿ ಖುಷ್ಬೂ ಸ್ಪಷ್ಟನೆ ನೀಡಿದ್ದು. ದೆಹಲಿಯಲ್ಲಿದ್ದಾಗ ವಿಶಾಲ್‌ಗೆ ಜ್ವರ ಕಾಣಿಸಿಕೊಂಡಿದೆ. ವಿಶಾಲ್‌ಗೆ 103 ಡಿಗ್ರಿ ಜ್ವರ ಇತ್ತು ಮತ್ತು ನಡುಗುತ್ತಿದ್ದರು ಎಂದು ಖುಷ್ಬು ಹೇಳಿದ್ದಾರೆ. ಇಷ್ಟು ಅಸ್ವಸ್ಥರಾಗಿದ್ದರೂ ಅವರು ಯಾಕೆ ಬಂದಿದ್ದೀರಿ ಎಂದು ಕೇಳಿದಾಗ ವಿಶಾಲ್, “11 ವರ್ಷಗಳ ನಂತರ ಚಿತ್ರ ಬಿಡುಗಡೆಯಾಗುತ್ತಿದೆ, ಹಾಗಾಗಿ ಈ ಕಾರ್ಯಕ್ರಮವನ್ನು ನಾನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದಿದ್ದರು. ಕಾರ್ಯಕ್ರಮ ಮುಗಿದ ತಕ್ಷಣ ವಿಶಾಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಖುಷ್ಬು ಬಹಿರಂಗಪಡಿಸಿದ್ದಾರೆ.
ಈ ನಡುವೆ ವಿಶಾಲ್ ಅನಾರೋಗ್ಯದ ಕುರಿತಂತೆ ಅಪೋಲೋ ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ವಿಶಾಲ್ ವೈರಲ್ ಜ್ವರದಿಂದ (Viral fever) ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಸಂಪೂರ್ಣ ಬೆಡ್ ರೆಸ್ಟ್ ತೆಗೆದುಕೊಳ್ಳುವುದು ಅಗತ್ಯ ಎಂದು ಅಪೋಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ವಿಶಾಲ್ರ ಇತ್ತೀಚಿನ ವೀಡಿಯೊಗಳು ಮತ್ತು ಫೋಟೋಗಳು ಟ್ರೆಂಡಿಂಗ್ ಆಗಿವೆ. ಇದನ್ನು ನೋಡಿದವರೆಲ್ಲರೂ ವಿಶಾಲ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 12 ವರ್ಷಗಳ ಹಿಂದೆ ಚಿತ್ರೀಕರಣ ಮುಗಿಸಿದ್ದ ವಿಶಾಲ್ ಅಭಿನಯದ ಮದಗಜರಾಜ ಚಿತ್ರ ಇದೀಗ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಸಂಕ್ರಾಂತಿ ಉಡುಗೊರೆಯಾಗಿ ಜನವರಿ 12 ರಂದು ತೆರೆಗೆ ಬರಲಿದೆ. ಸುಂದರ್ ನಿರ್ದೇಶನದ ಈ ಸಿನಿಮಾದಲ್ಲಿ ಅಂಜಲಿ ಮತ್ತು ವರಲಕ್ಷ್ಮಿ ನಾಯಕಿಯರಾಗಿ ನಟಿಸಿದ್ದಾರೆ. ಸೋನುಸೂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.