FILM
ನಟಿ ವಿರುದ್ದ ಸೋಶಿಯಲ್ ಮಿಡಿಯಾದಲ್ಲಿ ಅಶ್ಲೀಲ ಕಮೆಂಟ್ – ಚೆಮನೂರು ಜ್ಯುವೆಲ್ಲರಿ ಮಾಲೀಕ ಅರೆಸ್ಟ್
ಕೇರಳ ಜನವರಿ 08: ನಟಿ ಹನಿ ರೋಸ್ ಅವರ ಪೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮಾಡಿದ್ದ ಆರೋಪದ ಮೇಲೆ ಕೇರಳದ ಉದ್ಯಮಿ ಚೆಮ್ಮನೂರು ಜ್ಯುವೆಲ್ಲರ್ ಮಾಲೀಕ ಬಾಬಿ ಚೆಮನೂರು ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನನ್ನ ಪೋಟೋಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ ಎಂದು ನಟಿ ಹನಿರೋಸ್ ಅವರು ಪೊಲೀಸ್ ಠಾಣೆಗೆ ಕೇರಳದ ಬಲು ಜನಪ್ರಿಯ ಉದ್ಯಮಿ, ಚಿನ್ನದ ವ್ಯಾಫಾರಿ ಬಾಬಿ ಚೆಮನೂರು ವಿರುದ್ಧ ನಟಿ ಹನಿ ರೋಸ್ ದೂರು ಸಲ್ಲಿಸಿದ್ದರು, ಪ್ರಕರಣ ದಾಖಲಿಸಿದ 24 ಗಂಟೆಗಳ ಬಳಿಕ ಇದೀಗ ಬಾಬಿ ಚೆಮನೂರು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಬಿ ಚೆಮನೂರು ಭಾರತದ ಜನಪ್ರಿಯ ಚಿನ್ನದ ವ್ಯಾಪಾರಿಗಳಲ್ಲಿ ಒಬ್ಬರು. ಚೆಮನೂರು ಜ್ಯುವೆಲರ್ಸ್ ಅವರದ್ದೆ. ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ ಡಿಯಾಗೊ ಮರಡೋನ ಅವರನ್ನು ಕೊಚ್ಚಿಗೆ ಕರೆದುಕೊಂಡು ಬಂದು ತಮ್ಮ ಆಭರಣ ಸಂಸ್ಥೆಯ ರಾಯಭಾರಿಯನ್ನಾಗಿ ಮಾಡಿಕೊಂಡಿದ್ದರು ಬಾಬಿ ಚೆಮನೂರು.
ಯಾವುದೋ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಟಿ ಹನಿರೋಸ್ ಹಾಗೂ ಬಾಬಿ ಚೆಮನೂರು ನಡುವೆ ವಿವಾದವುಂಟಾಗಿದೆ. ಇದೇ ವಿಷಯವಾಗಿ ಬಾಬಿ ಚೆಮನೂರು ಹನಿ ರೋಸ್ ಬಗ್ಗೆ ಅವರ ದೇಹದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಇದೇ ಕಾರಣಕ್ಕೆ ಹನಿ ರೋಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಸಹ ಹನಿ ರೋಸ್ ತಮ್ಮ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ 30 ವ್ಯಕ್ತಿಗಳ ವಿರುದ್ಧ ಕೊಚ್ಚಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಒಬ್ಬ 60 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ ಸಹ. ಅಲ್ಲದೆ ತಾವು ಹನಿ ರೋಸ್ ಅವರ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ಕಣ್ಣಿಟ್ಟಿರುವುದಾಗಿಯೂ ಹೇಳಿದ್ದಾರೆ.
ಈ ಘಟನೆಗಳ ಬಳಿಕ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಹನಿ ರೋಸ್, ‘ನನ್ನನ್ನು ಆಹ್ವಾನಿಸಲಾದ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗುವುದು ನನ್ನ ವೃತ್ತಿಯ ಒಂದು ಭಾಗ. ನನ್ನ ಉಡುಪಿನ ಬಗ್ಗೆ ಕ್ರಿಯಾತ್ಮಕ ಟೀಕೆ, ವಿಮರ್ಶೆಗಳಿಗೆ ನಾನು ವಿರೋಧಿಯಲ್ಲ. ಆದರೆ ಅಶ್ಲೀಲ ಕಮೆಂಟ್ಗಳನ್ನು ನಾನು ಪ್ರೋತ್ಸಾಹಿಸುವುದಿಲ್ಲ. ಈ ದೇಶದ ಕಾನೂನು ಸಮ್ಮತಿಸುವ ಉಡುಪುಗಳನ್ನಷ್ಟೆ ನಾನು ಧರಿಸುತ್ತೇನೆ’ ಎಂದಿದ್ದಾರೆ ಹನಿ ರೋಸ್.