MANGALORE
ವಿನಾಯಕ ಬಾಳಿಗಾ ಹತ್ಯೆ ಪ್ರಕರಣ ತನಿಖೆಗೆ ವಿಶೇಷ ತಂಡ ರಚಿಸಿ
ವಿನಾಯಕ ಬಾಳಿಗಾ ಹತ್ಯೆ ಪ್ರಕರಣ ತನಿಖೆಗೆ ವಿಶೇಷ ತಂಡ ರಚಿಸಿ
ಮಂಗಳೂರು ಮಾರ್ಚ್ 21: ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ನಡೆದು ಇಂದಿಗೆ ಎರಡು ವರ್ಷವಾದರೂ ದುಷ್ಕರ್ಮಿಗಳಿಗೆ ಶಿಕ್ಷೆ ಆಗದಿರುವ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ದೇಶಪ್ರೇಮಿ ಸಂಘಟನೆ ಗಳ ಒಕ್ಕೂಟದಿಂದ ಮೆರವಣಿಗೆ ನಡೆಯಿತು.
ಮಂಗಳೂರಿನ ವೆಂಕಟರಮಣ ದೇವಾಲಯದ ಮುಂಭಾಗದಲ್ಲಿ ವಿನಾಯಕ ಬಾಳಿಗಾ ಅವರ ಸಹೋದರಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಾಳಿಗಾ ನಡೆದ ದಾರಿಯಲ್ಲಿ ಹೆಜ್ಜೆ ಹಾಕೋಣ ಬನ್ನಿ ಎಂದು ಸಾಗಿದ ಮೆರವಣಿಗೆ ವಿನಾಯಕ ಬಾಳಿಗಾ ಅವರ ಮನೆಯವರೆಗೆ ನಡೆಯಿತು.
ನಂತರ ಸಿಬಿಇಯು ಸಭಾಂಗದಣಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಿನಾಯಕ ಬಾಳಿಗಾ ಅವರ ಹತ್ಯೆ ಪ್ರಕರಣದ ತನಖೆಗೆ ವಿಶೇಷ ತಂಡ ರಚಿಸುವಂತೆ ಆಗ್ರಹಿಸಲಾಯಿತು.
You must be logged in to post a comment Login