DAKSHINA KANNADA
ಬೆಳ್ಳಾಯರು ಎಸ್ಟಿ ಕಾಲನಿ ರಸ್ತೆಗೆ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಚಾಲನೆ

ಬೆಳ್ಳಾಯರು ಎಸ್ಟಿ ಕಾಲನಿ ರಸ್ತೆಗೆ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಚಾಲನೆ
ಮಂಗಳೂರು,ಮಾರ್ಚ್ 21: ಪಡುಪಣಂಬೂರು ಗ್ರಾಮಪಂಚಾಯತ್ ನ ಬೆಳ್ಳಾಯರು ಎಸ್ಟಿ ಕಾಲನಿ ನಿವಾಸಿಗಳ ಬಹು ವರ್ಷಗಳ ಬೇಡಿಕೆಯಾದ ರಸ್ತೆಗೆ ಕೊನೆಗೂ ಈಡೇರಿದೆ.
ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ತನ್ನ ನಿಧಿಯಿಂದ 5 ಲಕ್ಷ ,ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ತನ್ನ ನಿಧಿಯ 3 ಲಕ್ಷ ಹಾಗೂ ತಾಲೂಕು ಪಂಚಾಯತ್ ಸದಸ್ಯ ಶರತ್ ಕುಬೆವೂರು ನಿಧಿಯ 1 ಲಕ್ಷ ಹಾಗೂ ಪಡುಪಣಂಬೂರು ಪಂಚಾಯತ್ ಸದಸ್ಯರ 1.50 ಲಕ್ಷ ನಿಧಿ ಬಳಸಿಕೊಂಡು ಈ ರಸ್ತೆಯನ್ನು ನಿರ್ಮಿಸಲಾಗಿದೆ.

ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಇಂದು ಈ ರಸ್ತೆಗೆ ಉದ್ಘಾಟನೆ ನೆರವೇರಿಸುವ ಮೂಲಕ ಈ ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆ ಮಾಡಿದರು.
ಬಿಜೆಪಿ ಪಕ್ಷದ ಪ್ರಮುಖರಾದ ಈಶ್ವರ ಕಟೀಲ್, ವಿನೋದ್ ಬೊಳ್ಳೂರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.