ಬೇಟೆಗೆ ತೆರಳಿದ ಇಬ್ಬರು ಯುವಕರು ನಾಪತ್ತೆ
ಮಂಗಳೂರು ಮಾರ್ಚ್ 22: ಬೇಟೆಗೆಂದು ತೆರಳಿದ್ದ ಇಬ್ಬರು ಯುವಕರು ನಾಪತ್ತೆಯಾದ ಘಟನೆ ಮೂಡಬಿದ್ರೆಯಲ್ಲಿ ನಡೆದಿದೆ.

ಮಂಗಳೂರು ಹೊರವಲಯದ ಮೂಡಬಿದ್ರೆಯ ಸ್ಥಳೀಯ ನಿವಾಸಿಗಳಾದ ಪ್ರವೀಣ್ ತೌರೋ ಮತ್ತು ಗ್ರೆಷನ್ ಎಂಬವರು ನಾಪತ್ತೆಯಾದ ಯುವಕರು ಎಂದು ಗುರುತಿಸಲಾಗಿದೆ. ಇವರು ಸೋಮವಾರ ರಾತ್ರಿ ಮೂಡಬಿದ್ರೆಯ ಕರಿಂಜೆ ಕಾಡಿಗೆ ಭೇಟೆಯಾಡಲು ಹೋಗಿದ್ದರು ಎಂದು ಹೇಳಲಾಗಿದ್ದು.
ನಂತರ ಮೂರು ದಿನಗಳಾದರೂ ವಾಪಾಸ್ ಬರದ ಹಿನ್ನಲೆಯಲ್ಲಿ ಕಾಡಿನಲ್ಲಿ ನಾಪತ್ತೆಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಈ ಬಗ್ಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಮೂಡಬಿದ್ರೆ ಪೊಲೀಸರು ಯುವಕರಿಗಾಗಿ ಹುಡುಕಾಟ ನಡೆಸಿದ್ದಾರೆ.
ಇಂದು ಅವರು ಬೇಟೆಗೆ ತೆರಳಿದ್ದ ಜೀಪ್ ಕಾಡಿನಲ್ಲಿ ಪತ್ತೆಯಾಗಿದ್ದು, ನಾಪತ್ತೆಯಾದ ಯುವಕರ ಮಾಹಿತಿ ಇನ್ನೂ ಲಭ್ಯವಾಗಿಲ್ಲ, ಈ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸರು ನಾಪತ್ತೆಯಾದ ಯುವಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.





