Connect with us

FILM

ತಮಿಳಿನ ಖ್ಯಾತ ನಟ ವಿಜಯ್ ಆಂಟನಿಗೆ ಅಪಘಾತ: ಸ್ಥಿತಿ ಚಿಂತಾಜನಕ

ಮಲೇಶಿಯಾ ಜನವರಿ 19: ಚಿತ್ರೀಕರಣದ ವೇಳೆ ತಮಿಳಿನ ಖ್ಯಾತ ನಟ ವಿಜಯ್ ಆಂಟನಿಗೆ ಅಪಘಾತವಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.


ಮಲೇಷ್ಯಾದಲ್ಲಿ ವಿಜಯ್ ಆಂಟನಿ ನಟನೆಯ ‘ಪಿಚ್ಚೈಕಾರನ್ 2’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ದೋಣಿಯೊಂದರಲ್ಲಿ ನಡೆಯುತ್ತಿದ್ದ ಸಾಹಸ ಸನ್ನಿವೇಶದ ದೃಶ್ಯದಲ್ಲಿ ದೋಣಿ ಅಪಘಾತಕ್ಕೀಡಾಗಿದೆ ಎಂದು ಹೇಳಲಾಗುತ್ತಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿತ್ರೀಕರಣದಲ್ಲಿ ಭಾಗಿಯಾಗಿದ್ದವರ ಹೇಳಿಕೆಯ ಪ್ರಕಾರ, ‘ಸಮುದ್ರ ಮಧ್ಯ ದೋಣಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಒಂದು ದೋಣಿ ಮತ್ತೊಂದು ದೋಣಿಯನ್ನು ಅಟ್ಟಿಸಿಕೊಂಡು ಬರುವ ದೃಶ್ಯ ಅದಾಗಿತ್ತು. ರಭಸವಾಗಿ ದೋಣಿಗಳು ಬರುವ ವೇಳೆಯಲ್ಲಿ ಒಂದು ದೋಣಿ ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ವಿಜಯ್ ಆಂಟನಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಮಲೇಷ್ಯಾದ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ವಿಜಯ್ ಕುಟುಂಬ ಮಲೇಷ್ಯಾಗೆ ಪ್ರಯಾಣ ಬೆಳೆಸಿದೆ. ಅಲ್ಲದೇ, ಅವರನ್ನು ಚೆನ್ನೈಗೆ ಕರೆತರುವ ಕುರಿತು ಪತ್ನಿ ಫಾತಿಮಾ ಹೇಳಿಕೆ ನೀಡಿದ್ದಾರೆ. ಸ್ಥಿತಿ ಚಿಂತಾಜನಕವಾಗಿದ್ದು, ಕುಟುಂಬ ಆತಂಕದಲ್ಲಿದೆ. ವಿಜಯ್ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

 

 

Advertisement
Click to comment

You must be logged in to post a comment Login

Leave a Reply