Connect with us

    FILM

    ಕನ್ನಡದ ಅಭಿನಯ ಶಾರದೆ ಜಯಂತಿ ಇನ್ನಿಲ್ಲ

    ಬೆಂಗಳೂರು: ಕನ್ನಡದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಇನ್ನು ನೆನಪು ಮಾತ್ರ. ಅನಾರೋಗ್ಯ ಕಾರಣದಿಂದ ಇಂದು ಅವರು ನಿಧನ ಹೊಂದಿದ್ದಾರೆ.

    ಕನ್ನಡದಲ್ಲಿ ಸುಮಾರು 190ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಲೀಲಾವತಿ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಐದು ಬಾರಿ ರಾಜ್ಯ ಪ್ರಶಸ್ತಿ ಅವರಿಗೆ ಒಲಿದು ಬಂದಿತ್ತು.

    77 ವರ್ಷ ವಯಸ್ಸಾಗಿರುವ ಜಯಂತಿ ಅವರಿಗೆ ಅಸ್ತಮಾದಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ.

    ನಟಿ ಜಯಂತಿ ಜನಿಸಿದ್ದು ಬಳ್ಳಾರಿಯಲ್ಲಿ ಜನವರಿ 6, 1945 ರಂದು. ಇವರ ನಿಜನಾಮ ಕಮಲಾ ಕುಮಾರಿ. ಇವರ ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿದ್ದರು. ತಾಯಿ ಸಂತಾನಲಕ್ಷ್ಮೀ. ಕಮಲಾ ಕುಮಾರಿ ಇನ್ನೂ ಚಿಕ್ಕವರಿದ್ದಾಗಲೇ ಅವರ ತಂದೆ-ತಾಯಿ ದೂರಾದರು. ಪತಿಯಿಂದ ದೂರ ಸರಿದ ಸಂತಾನಲಕ್ಷ್ಮೀ ಮಕ್ಕಳ ಜೊತೆ ಚೆನ್ನೈಗೆ ತೆರಳಿದರು. ಅಲ್ಲಿ, ಪುತ್ರಿ ಕಮಲಾ ಕುಮಾರಿಯನ್ನ ಡ್ಯಾನ್ಸ್ ಕ್ಲಾಸ್‌ಗೆ ಸೇರಿಸಿದರು. ಕಮಲಾ ಕುಮಾರಿ ಕ್ಲಾಸಿಕಲ್ ಡ್ಯಾನ್ಸರ್ ಆಗಬೇಕು ಅನ್ನೋದು ತಾಯಿಯ ಆಸೆ ಆಗಿತ್ತು.

    ಚಿಕ್ಕವಯಸ್ಸಿನಲ್ಲೇ ಚಿತ್ರೀಕರಣದ ಸ್ಟುಡಿಯೋಗಳಿಗೆ ತೆರಳುತ್ತಿದ್ದ ಬಾಲಕಿ ಕಮಲಾ ಕುಮಾರಿಯನ್ನ ಖ್ಯಾತ ನಟ ಎನ್‌.ಟಿ.ರಾಮಾ ರಾವ್ ನೋಡಿದ್ದರು. ಒಮ್ಮೆ ಕಮಲಾ ಕುಮಾರಿಯನ್ನ ಕರೆದು ತೊಡೆ ಮೇಲೆ ಕೂರಿಸಿಕೊಂಡು ”ನನಗೆ ಹೀರೋಯಿನ್ ಆಗ್ತೀಯಾ” ಅಂತ ಎನ್.ಟಿ.ರಾಮಾ ರಾವ್ ಕೇಳಿದ್ದರು. ಮುಂದೆ ಕಮಲಾ ಕುಮಾರಿ ಬಣ್ಣದ ಬದುಕಿಗೆ ಕಾಲಿಟ್ಟರು. ಜಯಂತಿ ಎಂದೇ ಜನಪ್ರಿಯರಾಗಿ ಎನ್.ಟಿ.ರಾಮಾ ರಾವ್ ಜೊತೆ ‘ಜಗದೇಕ ವೀರುಣಿ ಕಥಾ’, ‘ಕುಲ ಗೌರವಂ’, ‘ಕೊಂಡವೀಟಿ ಸಿಂಹಂ’, ‘ಜಸ್ಟಿಸ್ ಚೌಧರಿ’ ಚಿತ್ರಗಳಲ್ಲಿ ಅಭಿನಯಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *