Connect with us

LATEST NEWS

ಪಂಕ್ಚರ್ ಆಗಿದ್ದ ಕಾರಿನ ಟಯರ್ ಬದಲಿಸಲು ನೆರೆವಾಗಿ ಮಾನವೀಯತೆ ಮೆರೆದ ಪೊಲೀಸರು

ಮಂಗಳೂರು: ತಾಯಿ ಮಗಳು ಪಂಕ್ಚರ್ ಆಗಿದ್ದ ಕಾರಿನ ಟಯರ್ ಬದಲಾಯಿಸಲು ಕಷ್ಟಪಡುತ್ತಿದ್ದನ್ನು ಗಮನಿಸಿದ ಮಂಗಳೂರು ದಕ್ಷಿಣ ಸಂಚಾರ ( ನಾಗುರಿ) ಠಾಣಾ ಪೊಲೀಸರು ಟೈರ್ ಬದಲಿಸಲು ನೆರವಾಗಿ, ಮಾನವೀಯತೆ ಮೆರೆದಿದ್ದಾರೆ.

ಭಾನುವಾರ ಸಂಜೆ 6 ಗಂಟೆಗೆ ಕುಂದಾಪುರ ಮೂಲದ ವಿದ್ಯಾರ್ಥಿನಿ ಮತ್ತು ಅಕೆಯ ತಾಯಿ ಕಾರಿನಲ್ಲಿ ಪಂಪ್ ವೆಲ್ ಸಮೀಪ ಬರುತ್ತಿದ್ದಂತೆಯೇ ಟಯರ್ ಪಂಕ್ಚರ್ ಆಗಿತ್ತು.ಆ ವೇಳೆ ಗಸ್ತು ವಾಹನದಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರ ಬಳಿ ಟಯರ್ ಹಾಕುವವರ ಬಗ್ಗೆ ವಿಚಾರಿಸಿದರು .ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರಿ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟಯರನ್ನು ಬದಲಿಸಿ ಮಾನವೀಯತೆ ಮೆರೆದರು.