FILM
ತಮಿಳಿನ ಖ್ಯಾತ ಹಿರಿಯ ನಟ ದಿಲ್ಲಿ ಗಣೇಶ್ ಇನ್ನಿಲ್ಲ
ಚೆನ್ನೈ ನವೆಂಬರ್ 10: ತಮಿಳಿನ ಖ್ಯಾತ ಹಿರಿಯ ನಟ ದಿಲ್ಲಿ ಗಣೇಶ್ ವಯೋಸಹಜ ಕಾಯಿಲೆಯಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ದಿಲ್ಲಿ ಗಣೇಶ್ ಅವರು 1964 ರಿಂದ 1974 ರವರೆಗೆ ಭಾರತೀಯ ವಾಯುಪಡೆಯೊಂದಿಗೆ ಒಂದು ದಶಕದ ಅವಧಿಗೆ ಸೇವೆಯಲ್ಲಿದ್ದರು. ಆ ಬಳಿಕ ಅವರು ನಟನೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ದಿಲ್ಲಿ ಗಣೇಶ್ ಅವರ ಅಂತ್ಯಕ್ರಿಯೆ ನವೆಂಬರ್ 11 ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಪತ್ತಿನ ಪ್ರವೇಶಂ (1976) ನಲ್ಲಿ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅವರು ದೆಹಲಿಯ ನಾಟಕ ತಂಡವಾದ ದಕ್ಷಿಣ ಭಾರತ ನಾಟಕ ಸಭಾದ ಸಕ್ರಿಯ ಸದಸ್ಯರಾಗಿದ್ದರು. ತಮ್ಮ ವೃತ್ತಿಜೀವನದ ಮೂಲಕ 400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯದಾಗಿ ಉಲಗನಾಯಕನ್ ಕಮಲ್ ಹಾಸನ್ ಅವರ ಇಂಡಿಯನ್ 2 ನಲ್ಲಿ ಕಾಣಿಸಿಕೊಂಡಿದ್ದರು . ತಮಿಳು ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ನಟರೊಂದಿಗೆ ದಿಲ್ಲಿ ಗಣೇಶ್ ನಟಿಸಿದ್ದಾರೆ.