Connect with us

FILM

ಹೃದಯಾಘಾತದಿಂದ ಬಾಲಿವುಡ್ ಹಿರಿಯ ನಟ ಸತೀಶ್ ಕೌಶಿಕ್ ನಿಧನ

Share Information

ಮುಂಬೈ ಮಾರ್ಚ್ 9: ಬಾಲಿವುಡ್ ನ ಖ್ಯಾತ ಹಿರಿಯ ನಟ ನಿರ್ದೇಶಕನ ಸತೀಸ್ ಕೌಶಿಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.


ಹರಿಯಾಣದ ಮಹೇಂದ್ರಗಢದಲ್ಲಿ 1956ರ ಏಪ್ರಿಲ್ 13ರಂದು ಸತೀಶ್ ಕೌಶಿಕ್ ಜನಿಸಿದರು. 1972 ರಲ್ಲಿ ದೆಹಲಿಯ ಕಿರೋರಿ ಮಾಲ್ ಕಾಲೇಜಿನಲ್ಲಿ ಪದವಿ ಪಡೆದರು. ಕೌಶಿಕ್ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಮತ್ತು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಸಿನಿಮಾ ಕೇತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಇವರು ನಿರ್ದೇಶಕ, ರಂಗಭೂಮಿ ನಟ, ಹಾಸ್ಯನಟ, ಚಿತ್ರಕಥೆಗಾರರಾಗಿಯೂ ಹೆಚ್ಚು ಮನ್ನಣೆಯನ್ನು ಗಳಿಸಿದ್ದರು. 1990ರಲ್ಲಿ ತೆರೆ ಕಂಡ ‘ರಾಮ್ ಲಖನ್’ ಮತ್ತು 1997ರಲ್ಲಿ ಬಂದ ‘ಸಾಜನ್ ಚಲೇ ಸಸುರಲ್’ ಚಿತ್ರಗಳಲ್ಲಿನ ಅವರ ಅತ್ಯುತ್ತಮ ಹಾಸ್ಯನಟನೆಗಾಗಿ ಎರಡು ಬಾರಿ ಫಿಲ್ಮ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಮಿಸ್ಟರ್‌ ಇಂಡಿಯಾ ಚಿತ್ರದಲ್ಲಿ ಅವರ ‘ಕ್ಯಾಲೆಂಡರ್’ ಪಾತ್ರ ಮತ್ತು ‘ದೀವಾನಾ ಮಸ್ತಾನಾ’ದಲ್ಲಿ ‘ಪಪ್ಪು ಪೇಜರ್’ ಪಾತ್ರಗಳಿಂದಲೇ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದರು. ಕೌಶಿಕ್ ಅವರು ಹರಿಯಾಣ ಚಲನಚಿತ್ರ ಪ್ರಚಾರ ಮಂಡಳಿಯ ಅಧ್ಯಕ್ಷರಾಗಿ ಮತ್ತು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸತೀಶ್ ಕೌಶಿಕ್ ಅವರ ನಿಧನಕ್ಕೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.


Share Information
Advertisement
Click to comment

You must be logged in to post a comment Login

Leave a Reply