KARNATAKA
ಉತ್ತರ ಕನ್ನಡದಲ್ಲಿ ‘ಕಿಲ್ಲರ್ ಡೆಂಗಿ’ ನರ್ತನ, ಶತಕ ದಾಟಿದ ಸೋಂಕಿತರ ಸಂಖ್ಯೆ..!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರಣಾಂತಿಕವಾದ ಕಿಲ್ಲರ್ ಡೆಂಗಿ ಜ್ವರದ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿದ್ದು ಜನ ಹೈರಣಾಗಿದ್ದು ಪ್ರಾಣಭಯದಿಂದ ತತ್ತರಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ, ಖಾಸಗಿ ನರ್ಸಿಂಗ್ ಹೋಮ್, ಕ್ಲಿನಿಕ್ ಗಳಲ್ಲಿ ರೋಗ ಪೀಡಿತರ ಸಂಖ್ಯೆ ಹೆಚ್ಚೆಚ್ಚು ಕಾಣಸಿಗುತ್ತಿದ್ದು ಜನ ಸಹಜವಾಗಿ ಆತಂಕಿತರಾಗಿದ್ದಾರೆ. ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ವಾತಾವರಣದಲ್ಲಿನ ಏರುಪೇರು ಆಗಿದ್ದು ಇದರ ಪರಿಣಾಮ ಜ್ವರ, ನೆಗಡಿ, ವಾಂತಿ–ಭೇದಿ ಮುಂತಾದ ಕಾಯಿಲೆ ಪೀಡಿತರ ಸಂಖ್ಯೆ ಹೆಚ್ಚಳವಾಗಿದ್ದು ಡೆಂಗಿ ಸೋಂಕಿತರೂ ಹೆಚ್ಚುತ್ತಿದ್ದಾರೆ. ಜಿಲ್ಲೆಯಲ್ಲಿ ಸೊಳ್ಳೆಗಳಿಂದ ಹರಡುತ್ತಿರುವ ಕಿಲ್ಲರ್ ಕಿಲ್ಲರ್ ಡೆಂಗಿ ಪೀಡಿತರ ಸಂಖ್ಯೆ ಶತಕ ದಾಟಿದೆ. ಆರೋಗ್ಯ ಇಲಾಖೆಯಿಂದ ನಿರಂತರ ಜಾಗೃತಿಯಿಂದ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಂಡವರು ಗುಣಮುಖವಾಗುತ್ತಿದ್ದಾರೆ . ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ನಿತ್ಯ 1,500 ರಿಂದ 1,800 ಮಂದಿ ದಾಖಲಾಗುತ್ತಿದ್ದಾರೆ. ಇವರಲ್ಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯೇ ಹೆಚ್ಚಿದೆ . ಜಿಲ್ಲೆಯ ಹಳಿಯಾಳ,ಭಟ್ಕಳ, ದಾಂಡೆಲಿ, ಸಿದ್ದಾಪುರ,ಅಂಕೋಲಾ ತಾಲೂಕುಗಳಲ್ಲಿ ರೋಗಿಗಳ ಸಂಖ್ಯೆ ಏರುತ್ತಲೇ ಇದ್ದು, ಗಂಭೀರ ಪ್ರಕರಣದ ರೋಗಿಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಜಿಲ್ಲೆಯ ಆನೇಕ ಆರೋಗ್ಯ ಕೇಂದ್ರಗಳು ವೈದ್ಯರ ಕೊರತೆ ಎದುರಿಸುತ್ತಿದ್ದುಸಂಜೆಯ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
