Connect with us

    LATEST NEWS

    ರಸ್ತೆ ಹಂಪ್ ಕಾಣದೆ ಬೈಕ್ ಅಪಘಾತ – ವೈದ್ಯಕೀಯ ವಿಧ್ಯಾರ್ಥಿ ಸಾವು

    ಉಳ್ಳಾಲ ಡಿಸೆಂಬರ್ 13: ಬೈಕ್ ಅಪಘಾತದಲ್ಲಿ ವೈದ್ಯ ವಿಧ್ಯಾರ್ಥಿಯೊಬ್ಬ ಸಾವನಪ್ಪಿರುವ ಘಟನೆ ಅಂಬ್ಲಮೊಗರು ಗ್ರಾಮದ ಮದಕ‌ಬಳಿ ಸೋಮವಾರ ತಡರಾತ್ರಿ ನಡೆದಿದೆ. ಮೃತರನ್ನು ಬೆಂಗಳೂರು ಯಶವಂತಪುರ ನಿವಾಸಿ ನಿಶಾಂತ್ (22) ಎಂದು ಗುರುತಿಸಲಾಗಿದ್ದು, ಸಹ ಸವಾರ ಬೀದರ್ ನಿವಾಸಿ ಶಕೀಬ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,.


    ಇಬ್ಬರೂ ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿ ಇಂಟರ್ನ್ ಶಿಪ್‌ ಮಾಡುತ್ತಿದ್ದರು. ಕುತ್ತಾರ್‌ ನಲ್ಲಿರುವ ಫ್ಲ್ಯಾಟ್ ಒಂದರಲ್ಲಿ ವಾಸಿಸುತ್ತಿದ್ದ ಇಬ್ಬರೂ ರಾತ್ರಿ ಬೈಕ್ ರೈಡ್ ತೆರಳಿದ್ದ ಸಂದರ್ಭ ರಸ್ತೆಯಲ್ಲಿದ್ದ ಹಂಪ್ ಗಮನಕ್ಕೆ ಬಾರದೇ, ಬೈಕ್ ಮೇಲಕ್ಕೆ ಹಾರಿ ಇಬ್ಬರೂ ಎಸೆಯಲ್ಪಟ್ಟು, ಸವಾರ ನಿಶಾಂತ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಹೆಚ್ಚು ವಾಹನ ಸಂಚಾರವಿಲ್ಲದ ರಸ್ತೆಯಾಗಿದ್ದರಿಂದ ರಾತ್ರಿ ‌12.15 ರ ವೇಳೆಗೆ ಅಪಘಾತ ಸಂಭವಿಸಿದ್ದರೂ 12.30 ವೇಳೆ ಸ್ಥಳೀಯರ ಗಮನಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮೃತ ಏಕೈಕ ಪುತ್ರನಾಗಿದ್ದು, ಇನ್ನೆರಡು ತಿಂಗಳಲ್ಲಿ ನಡೆಯುವ ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಪಡೆಯಬೇಕಿತ್ತು. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply