LATEST NEWS
ಉಳ್ಳಾಲ ಉರೂಸ್ – ಎಪ್ರಿಲ್ 24 ರಿಂದ ರಸ್ತೆ ಸಂಚಾರದಲ್ಲಿ ಬದಲಾವಣೆ

ಮಂಗಳೂರು, ಎಪ್ರಿಲ್ 24: ಉಳ್ಳಾಲ ಖುತ್‌ಬುಝ್ಝಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ) ತಂಙಳ್‌ರವರ 432ನೇ ವಾರ್ಷಿಕ ಹಾಗೂ 22ನೇ ಪಂಚವಾರ್ಷಿಕ ಉರೂಸ್ ಎಪ್ರಿಲ್ .24 ರಿಂದ ಮೇ 18ರ ತನಕ ನಡೆಯಲಿದೆ. ಉರೂಸ್ ಕಾರ್ಯಕ್ರಮದಲ್ಲಿ ಹೊರ ರಾಜ್ಯ ಮತ್ತು ಇತರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿರುವುದರಿಂದ ರಸ್ತೆ ಸಂಚಾರದಲ್ಲಿ ಬದಲಾವಣೆಯನ್ನು ಮಂಗಳೂರು ಪೊಲೀಸರು ಸೂಚಿಸಿದ್ದಾರೆ.
ಸಂಚಾರಿ ಸಲಹೆಗಳು

ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ ಉಳ್ಳಾಲ ದರ್ಗಾ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮವು ದಿನಾಂಕ :24-04-2025 ರಿಂದ 18-05-2025 ರವರೆಗೆ ನಡೆಯಲಿದ್ದು, ಸದ್ರಿ ಕಾರ್ಯಕ್ರಮಗಳ ಅವಧಿಯಲ್ಲಿ ಹೊರ ರಾಜ್ಯ ಮತ್ತು ಇತರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಾಗೂ ವಾಹನಗಳು ಆಗಮಿಸುವ ನಿರೀಕ್ಷೆ ಇರುತ್ತದೆ. ಆದ್ದರಿಂದ ಸದರಿ ದಿನಾಂಕಗಳಲ್ಲಿ ಬೆಳಗ್ಗೆ 9-00 ಗಂಟೆಯಿಂದ ರಾತ್ರಿ 8-00 ಗಂಟೆಯವರೆಗೆ ಈ ಕೆಳಗಿನ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ.
> ಪಂಪುವೆಲ್ – ಉಳ್ಳಾಲ ನೇತ್ರಾವತಿ ಬ್ರಿಡ್ಜ್ ತೊಕ್ಕೊಟ್ಟು ಉಳ್ಳಾಲ ರಸ್ತೆಯ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ
> ತೊಕ್ಕೊಟ್ಟು ಜಂಕ್ಷನ್ ಉಳ್ಳಾಲ ಮುಖ್ಯ ರಸ್ತೆ ಮಾಸ್ತಿಕಟ್ಟೆ ರಾಣಿ ಅಬ್ಬಕ್ಕ ಸರ್ಕಲ್- ಸೋಮೇಶ್ವರ ರಸ್ತೆ
ಸುಗಮ ಸಂಚಾರಕ್ಕಾಗಿ ಕೆಳಕಂಡ ಪರ್ಯಾಯ ರಸ್ತೆಗಳನ್ನು ಉಪಯೋಗಿಸಬಹುದಾಗಿದೆ:
> ಮೆಲ್ಲಾರು ಜಂಕ್ಷನ್(ರಾಷ್ಟ್ರೀಯ ಹೆದ್ದಾರಿ-75):- ಮತ್ತೂರು/ ಬಂಟ್ವಾಳ/ ಬೆಳ್ತಂಗಡಿ/ ಬಿ.ಸಿ.ರೋಡ್ ಕಡೆಯಿಂದ ಕೇರಳಕ್ಕೆ ಹೋಗುವ ಮತ್ತು ತೊಕ್ಕೊಟ್ಟು. ಉಳ್ಳಾಲ ಹಾಗೂ ಉರೂಸ್ ಕಾರ್ಯಕ್ರಮಕ್ಕೆ ಬರುವ/ಹೋಗುವ ಸಾರ್ವಜನಿಕರ ವಾಹನಗಳಿಗೆ ಮೆಲ್ಲಾರು ಜಂಕ್ಷನ್ ನಲ್ಲಿ ತಿರುವು ಪಡೆದು ಬೊಳ್ಳಾರ್ ಮುಡಿಪು ಕೊಣಾಜೆ ತೊಕ್ಕೊಟ್ಟು ಮೂಲಕ ಸಂಚರಿಸಬಹುದಾಗಿದೆ.
> ಅಡ್ಯಾರು ಕಟ್ಟೆ (ರಾಷ್ಟ್ರೀಯ ಹೆದ್ದಾರಿ-73):- ಪರಂಗಿಪೇಟೆ, ತುಂಬೆ, ಅಡ್ಯಾರು ಕಡೆಯಿಂದ ಕೇರಳಕ್ಕೆ ಹೋಗುವ ಮತ್ತು ತೊಕ್ಕೊಟ್ಟು, ಉಳ್ಳಾಲ ಹಾಗೂ ಉರೂಸ್ ಕಾರ್ಯಕ್ರಮಕ್ಕೆ ಬರುವ/ಹೋಗುವ ಕಾರು/ದ್ವಿ-ಚಕ್ರ ವಾಹನಗಳು ಅಡ್ಯಾರು ಕಟ್ಟೆ (ಬೊಂಡಾ ಪ್ಯಾಕ್ಟರಿ) ರಸ್ತೆಯಾಗಿ ಹರೇಕಳ ಸೇತುವೆ ಗ್ರಾಮಚಾವಡಿ ನ್ಯೂಡ್ಡು ತೊಕ್ಕೊಟ್ಟು ಮೂಲಕ ಸಂಚರಿಸಬಹುದಾಗಿದೆ.
ಸಲಹೆಗಳು:-
> ನೇತ್ರಾವತಿ ಹಳೆಯ ಸೇತುವೆಯ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದ್ದು ನೇತ್ರಾವತಿ ಸೇತುವೆಯ ಮೂಲಕ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು ಮತ್ತು ಸವಾರರು ಸರದಿಯಂತೆ ಎಚ್ಚರಿಕೆಯಿಂದ ಚಲಿಸುವುದು.
> ಉರೂಸ್ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಉಳ್ಳಾಲ ಮುಖ್ಯರಸ್ತೆ, ಅಬ್ಬಕ್ಕ ವೃತ್ತದಿಂದ ದರ್ಗಾದ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬಾರದು.
> ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ನಿಗಧಿಪಡಿಸಿದ ನಿಲುಗಡೆ ಸ್ಥಳಗಳಲ್ಲೇ ನಿಲ್ಲಿಸುವುದು.
ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ವಿನಂತಿ.