Connect with us

LATEST NEWS

ಉಡುಪಿ: ಹಾಡಹಗಲೇ ದೇಗುಲದಲ್ಲಿ ದರೋಡೆ ಬಂದಿದ್ದ ಖತರ್ನಾಕ್ ದಂಪತಿ ಅಂದರ್

ಉಡುಪಿ,ಆಗಸ್ಟ್ 13: ಮಹಾರಾಜ ಶ್ರೀ ವರಾಹಸ್ವಾಮಿ ದೇವಸ್ಥಾನಕ್ಕೆ ಮಂಗಳವಾರ ಹಾಡಹಗಲೇ ದರೋಡೆ ಮಾಡಲು ಯತ್ನಿಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಬೈಂದೂರಿನಲ್ಲಿ ನಡೆದಿದೆ.

ಕಂಬದಕೋಣೆ ನಿವಾಸಿ ಕರುಣಾಕರ ದೇವಾಡಿಗ ಹಾಗೂ 17 ವರ್ಷ ವಯಸ್ಸಿನ ಆತನ ಪತ್ನಿ ಭದ್ರಾವತಿಯ ಬಿಂದು ಬಂಧಿತ ಆರೋಪಿಗಳು. ಮಂಗಳವಾರದಂದು ಬೈಂದೂರಿನ ಮರವಂತೆಯಲ್ಲಿ ಇರುವ ವರಾಹ ಸ್ವಾಮಿ ದೇವಸ್ಥಾನದ ಸಿಸಿ ಟಿವಿ ಕ್ಯಾಮೆರಾದಲ್ಲಿ ಆರೋಪಿಗಳು ಕಳ್ಳತನಕ್ಕೆ ಯತ್ನಿಸಿದ ದೃಶ್ಯ ಸೆರೆಯಾಗಿತ್ತು.

ಅದರ ಆಧಾರದ ಮೇರೆಗೆ ಇದೀಗ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ ಎಂ. ನಾಯಕ್ ಗಂಗೊಳ್ಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳ್ಳರ ಜಾಡು ಹಿಡಿದ ಪೊಲೀಸರು ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿಯವರ ಮಾರ್ಗದರ್ಶನ ಬಂಧಿಸಲಾಗಿದೆ.

ಆರೋಪಿಗಳ ವಿಚಾರಣೆಯನ್ನು ನಡೆಸಿದಾಗ ಬೈಂದೂರು ಭಾಗದ ಹಲವಾರು ದೇವಸ್ಥಾನಗಳಲ್ಲಿ ಕಳೆದ ಮೂರು ತಿಂಗಳಿನಿಂದ ನಡೆದ ಕಳ್ಳತನ ಪ್ರಕರಣಗಳನ್ನು ಈತನೇ ಎಸಗಿರುವುದು ತಿಳಿದುಬಂದಿದೆ. ತಗ್ಗರ್ಸೆ ಚಂದಣದ ಸೋಮಲಿಂಗೇಶ್ವರದ ದುರ್ಗಾಪರಮೇಶ್ವರಿ ದೇವಸ್ಥಾನ, ನಾಗೂರು ಸಿಂಗಾರ ಗರಡಿ, ಹೊಸೂರು ಕಾನಬೇರು ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ಕಳವುಗೈದು ನಗನಾಣ್ಯವನ್ನು ಕದ್ದಿರುವುದು ಬೆಳಕಿಗೆ ಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *