Connect with us

KARNATAKA

ನಾಗರಹಾವಿನಿಂದ ಮಗನನ್ನು ಕಾಪಾಡಿದ ತಾಯಿ…!!

ಮಂಡ್ಯ ಅಗಸ್ಟ್ 13: ಕೊನೆಕ್ಷಣದಲ್ಲಿ ನಾಗರ ಹಾವಿನಿಂದ ತಮ್ಮ ಮಗನನ್ನು ತಾಯಿಯೊಬ್ಬರು ಕಾಪಾಡಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ವಿಡಿಯೋ ಎದೆ ಝಲ್​ ಅನ್ನಿಸುತ್ತಿದೆ.


ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಕೆ.ಎಂ.ದೊಡ್ಡಿ ವೈದ್ಯ ಡಾ.ವಿಷ್ಣು ಪ್ರಸಾದ್ ಮತ್ತು ಪ್ರಿಯಾ ದಂಪತಿ ಪುತ್ರ ನಾಗರಹಾವಿನ ಕಡಿತದಿಂದ ಬಚಾವಾಗಿದ್ದಾನೆ. ಅಗಸ್ಟ್ 9 ರಂದು ಮಂಡ್ಯದ ಚಾಮುಂಡೇಶ್ವರಿ ನಗರದ ನಿವಾಸಕ್ಕೆ ಪತ್ನಿ ಮತ್ತು ಮಗ ಆಗಮಿಸಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.

ಮನೆಯಿಂದ ಹೊರ ಹೋಗಲು ತಾಯಿ ಜತೆ ಬಾಲಕ ಹೊರ ಬಂದಿದ್ದಾನೆ. ಅದೇ ಸಮಯಕ್ಕೆ ಬಾಗಿಲ ಮೆಟ್ಟಿಲ ಬಳಿ ನಾಗರಹಾವು ಹೋಗುತ್ತಿತ್ತು. ಹಾವನ್ನು ಗಮನಿಸದೆ ಬಾಲಕ ಹಾವಿನ ತಲೆ ಬಳಿಯೇ ಕಾಲಿಟ್ಟಿದ್ದಾನೆ. ಈ ವೇಳೆ ಹೆಡೆ ಎತ್ತಿ ನಿಂತಿದೆ. ಕೂಡಲೇ ಹುಡುಗನು ಹಾವಿನ ಹತ್ತರವೇ ಹೋಗಿದ್ದಾನೆ. ಇನ್ನೇನು ನಾಗರಹಾವು ಇನ್ನೇನ್ನು ಕಚ್ಚೇ ಬಿಡ್ತು ಎನ್ನುವಷ್ಟರಲ್ಲಿ ಮಗನನ್ನ ತಾಯಿ ದೂರ ಎಳೆದುಕೊಂಡಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply