ಮಂಗಳೂರು ಮೇ 25: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಬಿಕರ್ನಕಟ್ಟೆ ಸಮೀಪದ ಕೈಕಂಬ ಬಳಿಯ ಹೆದ್ದಾರಿಯಲ್ಲಿ ನಡೆದಿದ್ದು, ಸುರಿಯುತ್ತಿರುವ ಭಾರೀ ಮಳೆಯ ನಡುವೆಯೂ ಕಾರು ಬೆಂಕಿಗಾಹುತಿಯಾಗಿದೆ.


ಎಡೆಬಿಡದೆ ಸುರಿಯುವ ಮಳೆಯಲ್ಲೇ ಚಲಿಸುತ್ತಿದ್ದ ಕಾರಿನ ಬೋನೆಟ್‌ನಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವ ಕಾರಿನಲ್ಲಿದ್ದವರು ಇಳಿದು ಅಪಾಯದಿಂದ ಪಾರಾದರು ಎಂದು ತಿಳಿದು ಬಂದಿದೆ. ಆದರೆ, ಕಾರು ಭಾಗಶ: ಬೆಂಕಿಗೆ ಆಹುತಿಯಾಗಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Share Information