Connect with us

LATEST NEWS

ನಾಪತ್ತೆಯಾಗಿರುವ 9ನೇ ವಿಧ್ಯಾರ್ಥಿನಿ ಪತ್ತೆಗೆ ಪೊಲೀಸರಿಂದ ಲುಕ್ ಔಟ್ ನೋಟಿಸ್

ಉಡುಪಿ ಜುಲೈ 24: ಮೂರು ತಿಂಗಳಿನಿಂದ ನಾಪತ್ತೆಯಾಗಿರುವ 9ನೇ ತರಗತಿ ವಿಧ್ಯಾರ್ಥಿನಿ ಪೆರಂಪಳ್ಳಿಯ ಅವೀನಾ (16) ಎಂಬಾಕೆಯ ಪತ್ತೆಗಾಗಿ ಮಣಿಪಾಲ ಪೊಲೀಸರು ಲುಕ್ ಔಟ್ ನೋಟೀಸ್ ಜಾರಿಗೊಳಿಸಿದ್ದಾರೆ.


2021 ರ ಏಪ್ರಿಲ್ 13 ರಿಂದ ಪೆರಂಪಲ್ಲಿಯಲ್ಲಿರುವ ತನ್ನ ಮನೆಯಿಂದ ಕಾಣೆಯಾಗಿದ್ದಳು. ಒಂಬತ್ತನೆ ತರಗತಿ ಓದುತ್ತಿದ್ದ ಈಕೆ ಕನ್ನಡ ಭಾಷೆ ಬಲ್ಲವಳಾಗಿದ್ದಾಳೆ.

ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಅವೀನಾದ ತಾಯಿ ಆಶಾ ಡಿಸೋಜಾ ಕಾಣೆಯಾದ ದೂರು ದಾಖಲಿಸಿದ್ದಾರೆ. ಬಾಲಕಿ ಬಗ್ಗೆ ಸುಳಿವು ಇದ್ದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮಣಿಪಾಲ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.