Connect with us

LATEST NEWS

ಕಾಸರಗೋಡು – ಸ್ನಾನದ ಕೋಣೆಯಲ್ಲಿ ನೇಣಿಗೆ ಕೊರಳೊಡ್ಡಿದ ನವ ವಿವಾಹಿತೆ

ಕಾಸರಗೋಡು ಜುಲೈ 24: ನವವಿವಾಹಿತೆಯೊಬ್ಬರು ಪತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಮೃತ ಮಹಿಳೆಯನ್ನು ಶ್ರೇಯ (22) ಎಂದು ಗುರುತಿಸಲಾಗಿದೆ. ಇವರು 6 ತಿಂಗಳ ಹಿಂದಷ್ಟೇ ಶ್ರೇಯಾ ಅವರನ್ನು ಕಿದೂರು ಮೈರಾಳದ ಉದಯಕುಮಾರ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ವಿವಾಹದ ಬಳಿಕ ಇವರ ಸಂಸಾರ ಚೆನ್ನಾಗಿಯೇ ಇತ್ತು ಎನ್ನಲಾಗಿದೆ.
ಆದರೆ ಇಂದು ಪತಿ ಮನೆಯಲ್ಲಿ ಸ್ನಾನದ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಂದು ಬೆಳಿಗ್ಗೆ ಸ್ನಾನಕ್ಕೆಂದು ಹೇಳಿ ತೆರಳಿದ್ದ ಶ್ರೇಯಾ ಸ್ನಾನದ ಮನೆಯಿಂದ ಹೊರಬಾರದಿರುವುದನ್ನು ಗಮನಿಸಿದ ಮನೆಯವರು ಬಾಗಿಲು ಬಡಿದು ತೆರೆಯದಿದ್ದಾಗ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶ್ರೇಯಾ ಪತ್ತೆಯಾಗಿದ್ದಾರೆ.ಈ ಬಗ್ಗೆ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.