Connect with us

    KARNATAKA

    ಉಡುಪಿ ಮಣಿಪಾಲ ಕಾಲೇಜಿನ ಪ್ರೊ.ಅಲೆಕ್ಸ್ ಜೋಸೆಫ್ ಹೃದಯಾಘಾತಕ್ಕೆ ಬಲಿ..!

    ಉಡುಪಿ : ಉಡುಪಿ ಮಣಿಪಾಲ ಫಾರ್ಮಸ್ಯುಟಿಕಲ್ ಸೈನ್ಸ್ ಕಾಲೇಜ್ ಪ್ರಾಧ್ಯಾಪಕ ಡಾ.ಅಲೆಕ್ಸ್ ಜೋಸೆಫ್(47) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

    ಮಂಗಳವಾರ ಬೆಳಗ್ಗೆ 11.50ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಜೋಸೆಫ್ ಅವರು ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸ್ ನ ಪ್ರಾಧ್ಯಾಪಕರಾಗಿ  ಕೆಲಸ ಮಾಡುತ್ತಿದ್ದರು. ಅದೇ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಅವರ ಪತ್ನಿ ಎಂಜೆಲ್ ಟ್ರೀಸಾ ಅಲೆಕ್ಸ್ ಜೊತೆ ಬೆಳಗ್ಗೆ 8 ಗಂಟೆಗೆ ಕಾಲೇಜಿಗೆ ತೆರಳಿದ್ದರು. ಕಾಲೇಜಿನಲ್ಲಿರುವ ವೇಳೆ ಡಾ.ಅಲೆಕ್ಸ್ ಜೋಸೆಫ್ ಅವರಿಗೆ ವಿಪರೀತ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅಲೆಕ್ಸ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply