LATEST NEWS
ರೈತ ಕಾನೂನು ವಿರೋಧಿ ಹೋರಾಟದಲ್ಲಿ ಹಿಂದೂ ಮಹಿಳೆಯರಿಗೆ ಅವಮಾನ, ವಿವಾದಕ್ಕೆ ಕಾರಣವಾದ ಯೋಗರಾಜ್ ಸಿಂಗ್……….

ಪಂಜಾಬ್, ಡಿಸೆಂಬರ್ 05: ರೈತ ಕಾನೂನು ವಿರೋಧಿ ಹೋರಾಟದಲ್ಲಿ ಹಿಂದೂಗಳ ಬಗ್ಗೆ ಹಾಗೂ ಹಿಂದೂ ಮಹಿಳೆಯರ ಬಗ್ಗೆ ಅವಹೇಳನಕಾರಿ ಭಾಷಣ ಮಾಡುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ವಿವಾದ ಮೈಗೆಳೆದುಕೊಂಡಿದ್ದಾರೆ.
ಪಂಜಾಬ್, ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಉದ್ದೇಶಿಸಿ ಮಾತನಾಡಿದ ಯೋಗರಾಜ್ ಸಿಂಗ್ ಹಿಂದೂ ಮಹಿಳೆಯರು ಸಿಕ್ಕ ಸಿಕ್ಕವರ ಜೊತೆ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹಿಂದೂ ಮಹಿಳೆಯರನ್ನು ಮೊಗಲರಿಂದ ರಕ್ಷಿಸಿರುವುದು ಸಿಖ್ ಜನಾಂಗವಾಗಿದೆ. ಹಿಂದೂಗಳು ದ್ರೋಹಿಗಳಾಗಿದ್ದು, 1 ಸಾವಿರ ವರ್ಷಗಳ ಕಾಲ ಮೊಗಲರ ಗುಲಾಮರಾಗಿ ಬದುಕಿದವರು ಎಂದಿದ್ದಾರೆ.

ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ರಂತಹ ಗುಜರಾತಿಗಳನ್ನು ನಂಬಬಾರದು ಎಂದು ತನ್ನ ಭಾಷಣದಲ್ಲಿ ಹೇಳುವ ಮೂಲಕ ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಯೋಗರಾಜ್ ವಿರುದ್ಧ ಇದೀಗ ಭಾರೀ ಟೀಕೆಗಳು ಕೇಳಿ ಬರಲಾರಂಭಿಸಿದ್ದು, ಯೋಗರಾಜ್ ಸಿಂಗ್ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ರೈತರ ಚಳವಳಿಯಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಏಳಲಾರಂಭಿಸಿದ್ದು, ಪ್ರತಿಭಟನೆಯ ಹಿಂದೆ ವಿಚ್ಛಿದ್ರಕಾರಿ ಶಕ್ತಿಗಳ ಕೈವಾಡವಿದೆ ಎನ್ನುವ ಆರೋಪಗಳೂ ಕೇಳಿ ಬರಲಾರಂಭಿಸಿದೆ.