LATEST NEWS
ಮಂಗಳೂರು – ಉಗ್ರ ಸಂಘಟನೆ ಪರ ಗೋಡೆ ಬರಹ ತೀರ್ಥಹಳ್ಳಿಯ ಇಬ್ಬರ ಬಂಧನ
ಮಂಗಳೂರು ಡಿಸೆಂಬರ್ 05: ಮಂಗಳೂರು ನಗರದಲ್ಲಿ ಇತ್ತೀಚೆಗೆ ಬಿಜೈ ಮತ್ತು ಕೋರ್ಟ್ ಸಮೀಪ ಗೋಡೆಗಳಲ್ಲಿ ಕಾಣಿಸಿಕೊಂಡ ಉಗ್ರರ ಪರ ಬರಹ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಈ ಕುರಿತಂತೆ ಮಾಹಿತಿ ನೀಡಿದ ಅವರು ಬಂಧಿತ ಆರೋಪಿಗಳು ತೀರ್ಥಹಳ್ಳಿ ನಿವಾಸಿಗಳಾದ ಮಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಅಹ್ಮದ್ (21) ಎಂದು ಗುರುತಿಸಲಾಗಿದ್ದು, ಆರೋಪಿಗಳಲ್ಲಿ ಮೊಹಮ್ಮದ್ ಶಾರೀಕ್ ನಗರದಲ್ಲಿ ಕಳೆದ ಅಕ್ಟೋಬರ್ ತಿಂಗಳಿನಿಂದ ಆನ್‌ಲೈನ್ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ ಎಂದು ಮಾಹಿತಿ ನೀಡಿದರು.
ಈ ಇಬ್ಬರು ಆರೋಪಿಗಳು ನವೆಂಬರ್ 27ರಂದು ಬಿಜೈ ವಸತಿ ಸಮುಚ್ಚಯದ ಕಂಪೌಂಡ್ ಹಾಲ್ ಮತ್ತು ನವೆಂಬರ್ 29ರಂದು ಜಿಲ್ಲಾ ಕೋರ್ಟ್ ಸಮೀಪ ಬೈಕ್‌ನಲ್ಲಿ ಬಂದು ಉಗ್ರರ ಪರ ಬರಹ ಬರೆದಿದ್ದರು.
Facebook Comments
You may like
-
ಬಂಗಾರ್ ಪಲ್ಕೆಯ ಜಲಪಾತದ ಗುಡ್ಡ ಕುಸಿದು ಓರ್ವ ಮೃತ್ಯು
-
ಕಡಬ ಹೆದ್ದಾರಿಯಲ್ಲಿ ಭೀಕರ ಅಪಘಾತ; ಒಂದು ಬಲಿ..
-
ಮಹಿಳೆಯನ್ನು ಚುಡಾಯಿಸಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತ; ಬಿದ್ದ ಏಟಿಗೆ ಸ್ಥಳದಲ್ಲೆ ಸಾವು
-
ಲಾರಿ ಚಾಲಕನ ಅವಾಂತರ-ಜನಸಾಮಾನ್ಯ ಪ್ರಾಣ ಉಳಿಸಿದ ಕಾಪು ಎಸೈ ರಾಘವೇಂದ್ರ
-
ಪರಿಸರ ಉಳಿಸುವಂತೆ ಹಸಿರು ದಳದಿಂದ ಆರಂಭವಾಗಿದೆ ಜಾಗೃತಿಯ ಆಗ್ರಹ…..
-
ಬಂಟ್ವಾಳ ಚರ್ಚ್ ಕಳ್ಳತನಕ್ಕೆ ಯತ್ನ; ಪವಿತ್ರ ಸೊತ್ತುಗಳಿಗೆ ಹಾನಿ
You must be logged in to post a comment Login