Connect with us

LATEST NEWS

ಪ್ರಾಯೋಗಿಕ ಕೊವಾಕ್ಸಿನ್ ಲಸಿಕೆ ಪಡೆದರೂ….ಹರಿಯಾಣದ ಆರೋಗ್ಯ ಸಚಿವ ಅನಿಲ್​ ವಿಜ್ ರಿಗೆ ಕೊರೊನಾ

ಚಂಡೀಗಢ: ದೇಶ ಕೊರೊನಾ ಲಸಿಕೆ ಪಡೆಯುವ ದಾವಂತದಲ್ಲಿರುವಂತೆ ಒಂದು ಕೆಟ್ಟ ಸುದ್ದಿ ಹೊರ ಬಿದ್ದಿದ್ದು, ಭಾರತ್ ಬಯೋಟೆಕ್ ಅಭಿವೃದ್ದಿ ಪಡಿಸಿದ್ದ ಕೋವಾಕ್ಸಿನ್​​ ಪ್ರಾಯೋಗಿಕ ಕರೊನಾ ಲಸಿಕೆ ಪಡೆದಿದ್ದ ಹರಿಯಾಣದ ಆರೋಗ್ಯ ಸಚಿವ ಅನಿಲ್​ ವಿಜ್ ಅವರಿಗೆ ಕೋವಿಡ್​-19 ಪಾಸಿಟಿವ್​ ವರದಿಯಾಗಿದೆ.


ಇಂದು ಟ್ವೀಟ್ ಮೂಲಕ ಈ ಮಾಹಿತಿ ಹಂಚಿಕೊಂಡ ಅನಿಲ್ ವಿಜ್ ಅವರು ಕೋವಿಡ್​ ಪಾಸಿಟಿವ್​ ಆಗಿರುವುದನ್ನು ಖಚಿತಪಡಿಸಿದ್ದಾರೆ. ತಮ್ಮ ಸಂಪರ್ಕದಲ್ಲಿದ್ದವರು ಕರೊನಾ ಪರೀಕ್ಷೆ ಮಾಡಿಸುವಂತೆ ಸಚಿವರು ಮನವಿ ಮಾಡಿದ್ದಾರೆ. ಅಲ್ಲದೆ, ಸಚಿವರು ಅಂಬಾಲದಲ್ಲಿರುವ ಸಿವಿಲ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮೊದಲು ವಿಜ್​ ಅವರು ನವೆಂಬರ್​ 20ರಂದು ಕೋವಾಕ್ಸಿನ್​ ಹೆಸರಿನ ಕೋವಿಡ್​ ಪ್ರಾಯೋಗಿಕ ಲಸಿಕೆಯನ್ನು ಪಡೆದುಕೊಂಡಿದ್ದರು.


ನಿನ್ನೆ ಅಷ್ಟೆ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಸಿಕೆ ಕೊನೆಯ ಹಂತದಲ್ಲಿದ್ದು, ವಿಜ್ಞಾನಿಗಳಿಂದ ಗ್ರೀನ್ ಸಿಗ್ನಲ್ ದೊರೆತ ಕೂಡಲೇ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದ್ದರು.  ಈಗಾಗಲೇ ಭಾರತ್ ಬಯೋಟೆಕ್ ಅಭಿವೃದ್ದಿ ಪಡಿಸಿರುವ ಕೊವಾಕ್ಸಿನ್ ​ಕರೊನಾ ವಿರುದ್ಧ ​ ಪರಿಣಾಮಕಾರಿ ಫಲಿತಾಂಶ ನೀಡುತ್ತಿದೆ ಎಂದು ಹೇಳಲಾಗಿದ್ದು, ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಭಾಗಿತ್ವದಲ್ಲಿ ಭಾರತ್​ ಬಯೋಟೆಕ್​ ಕಂಪನಿಯೂ ಅಭಿವೃದ್ಧಿ ಪಡಿಸುತ್ತಿದೆ. ಈಗ ಲಸಿಕೆ ಪಡೆದರೂ ಕೊರೊನಾ ಮತ್ತೆ ಬಂದಿರುವುದು ..ನಿರಾಸೆಯನ್ನು ಮೂಡಿಸಿದೆ.

Facebook Comments

comments