Connect with us

LATEST NEWS

ಜೀವಕ್ಕೆ ಅಪತ್ತು ತರುವ ಬುಲ್ ಗಾರ್ಡ್ ಗಳ ನಿಷೇಧಕ್ಕೆ ಕೇಂದ್ರ ಚಿಂತನೆ

ಜೀವಕ್ಕೆ ಅಪತ್ತು ತರುವ ಬುಲ್ ಗಾರ್ಡ್ ಗಳ ನಿಷೇಧಕ್ಕೆ ಕೇಂದ್ರ ಚಿಂತನೆ

ನವದೆಹಲಿ, ಡಿಸೆಂಬರ್ 27 : ಕೇಂದ್ರ ಸಾರಿಗೆ ಸಚಿವಾಲಯ ಕಾರು ಹಾಗೂ ಚತುಷ್ಚಕ್ರ ವಾಹಗಳಲ್ಲಿನ ಕ್ರಾಶ್ ಗಾರ್ಡ್ ಗಳನ್ನು ನಿಷೇಧಿಸಲು ಚಿಂತನೆ ನಡೆಸಿದೆ. ಕ್ರಾಶ್ ಗಾರ್ಡ್ ಅಥವಾ ಬುಲ್ ಗಾರ್ಡ್ ಗಳು ಚಾಲಕ ಮತ್ತು ಪಾದಚಾರಿಗಳಿಗೆ ಜೀವಕ್ಕೆ ಕುತ್ತು ತರುತ್ತಿದೆ ಎಂದು ಹೇಳಿದೆ.

ಸಾಮಾನ್ಯವಾಗಿ ಬುಲ್ ಗಾರ್ಡುಗಳನ್ನು಼ ವಾಹನದ ರೇಡಿಯೇಟರ್ ಮತ್ತು ಹೆಡ್ ಲೈಟುಗಳನ್ನು ರಕ್ಷಿಸುವ ಸಲುವಾಗಿ ಕಾರಿನ ಅಥವಾ ಇತರ ವಾಹನಗಳ ಮುಂಭಾಗದಲ್ಲಿ ಅಳವಡಿಸಲಾಗುತ್ತಿದೆ.

ಅದರೆ ಇತ್ತೀಚಿನ ದಿನಗಳಲ್ಲಿ ಬುಲ್ ಗಾರ್ಡ್ ಗಳು ಸುರಕ್ಷೆಗಿಂತ ಹೊಸ ಫ್ಯಾಷನ್ ಟ್ರೆಂಡಾಗಿ ವಾಹನಗಳಲ್ಲಿ ಚಾಲ್ತಿಯಲ್ಲಿದೆ.

ಖಾಸಾಗಿ ವಾಹನಗಳಿಂದ ಆರಂಭವಾಗಿ ಸರ್ಕಾರಿ ಹಾಗೂ ಪೋಲಿಸ್ ಅಧಿಕಾರಿಗಳ ವಾಹನಗಳೂ ಬುಲ್ ಗಾರ್ಡುಗಳನ್ನು ಅಳವಡಿಸಿವೆ.

ಅದರೆ ಈ ಗಾರ್ಡ್ ಗಳ ಬಳಕೆಯಿಂದ ಸುರಕ್ಷತೆಗಿಂತ ಅಪತ್ತೇ ಜಾಸ್ತಿಯಾಗುತ್ತಿದೆ. ಇದು ಮೋಟರ್ ವೆಹಿಕಲ್ಸ್ ಆಕ್ಟ್ ಅನ್ನು ಉಲ್ಲಂಘಿಸುತ್ತದೆ ಮತ್ತುಸುರಕ್ಷತಾ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಅದು ಹೇಳಿದೆ,

ಈ ಗಾರ್ಡ್ ಗಳಿಂದ ವಾಹನ ಚಾಲಕರಿಗೆ, ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರ ಜೀವಕ್ಕೆ ಮಾರಕವಾಗಿ ಪರಿಣಮಿಸಿದೆ.

ಕ್ರಾಶ್ ಗಾರ್ಡ್ ಗಳ ಅಳವಡಿಕೆಯಿಂದ ಅಪಘಾತದ ಸಂದರ್ಭದಲ್ಲಿ ವಾಹನ ಸುರಕ್ಷತೆಗಾಗಿ ಅಳವಡಿಸಿರುವ ಗಾಳಿಯ ಚೀಲಗಳು (Air Baloon) ಸರಿಯಾಗಿ ತೆರೆದುಕೊಳ್ಳದೆ ,ಚಾಲಕನ ಸುರಕ್ಷತೆಗೆ ತಡೆಯನ್ನುಂಟು ಮಾಡುತ್ತದೆ.

ಮತ್ತೊಂದೆಡೆ ಇದು ಉಕ್ಕು ಅಥವಾ ಸ್ಟೀಲ್ ನಿಂದ ತಯಾರಿಸಲ್ಪಡುವ ಕಾರಣ ಪಾದಚಾರಿ ಅಥವಾ ದ್ವಿಚಕ್ರದ ವಾಹನ ಸವಾರರಿಗೂ ತೀವ್ರವಾಗಿ ಹಾನಿಮಾಡುತ್ತದೆ ಎಂದು ವರದಿಗಳು ಸೂಚಿಸುತ್ತವೆ.

ವರದಿಗಳ ಪ್ರಕಾರ 2015 ರಲ್ಲಿ ರಸ್ತೆ ಅಪಘಾತದಲ್ಲಿ ಕೇವಲ 1.5 ಲಕ್ಷ ಜನರು ಈ ಬುಲ್ ಗಾರ್ಡಿನಿಂದ ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸಾರಿಗೆ ಸಚಿವಾಲಯ ಬುಲ್ ಗಾರ್ಡುಳ ಬಳಕೆಯನ್ನು ನಿಷೇಧಿಸಲು ಚಿಂತನೆ ನಡೆಸಿದೆ.

ನಿಷೇದದ ಸಂದರ್ಭದಲ್ಲಿ ಅದರ ಉಲ್ಲಂಘನೆ ಆದಲ್ಲಿ 1,000 ರಿಂದ 5,000 ವರೆಗೆ ದಂಡ ವಿಧಿಸಬಹುದು ಮತ್ತು ಮೂರು ತಿಂಗಳ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

ವಾಗಿ ವಾಹನದ ರೇಡಿಯೇಟರ್ ಮತ್ತು ಹೆಡ್ ಲೈಟುಗಳನ್ನು ರಕ್ಷಿಸುವ ಸಲುವಾಗಿ ಕಾರಿನ ಅಥವಾ ಇತರ ವಾಹನಗಳ ಮುಂಭಾಗದಲ್ಲಿ ಅಳವಡಿಸಲಾಗುತ್ತಿದೆ

ಅದರೆ ಇತ್ತೀಚಿನ ದಿನಗಳಲ್ಲಿ ಬುಲ್ ಗಾರ್ಡ್ ಗಳು ಸುರಕ್ಷೆಗಿಂತ ಹೊಸ ಫ್ಯಾಷನ್ ಟ್ರೆಂಡಾಗಿ ವಾಹನಗಳಲ್ಲಿ ಚಾಲ್ತಿಯಲ್ಲಿದೆ.

ಇಂದು ಖಾಸಾಗಿ ವಾಹನಗಳಿಂದ ಆರಂಭವಾಗಿ ಸರ್ಕಾರಿ ಹಾಗೂ ಪೋಲಿಸ್ ಅಧಿಕಾರಿಗಳ ವಾಹನಗಳೂ ಬುಲ್ ಗಾರ್ಡುಗಳನ್ನು ಅಳವಡಿಸಿವೆ.

ಅದರೆ ಈ ಗಾರ್ಡ್ ಗಳ ಬಳಕೆಯಿಂದ ಸುರಕ್ಷತೆಗಿಂತ ಅಪತ್ತೇ ಜಾಸ್ತಿಯಾಗುತ್ತಿದೆ.

ಇದು ಮೋಟರ್ ವೆಹಿಕಲ್ಸ್ ಆಕ್ಟ್ ಅನ್ನು ಉಲ್ಲಂಘಿಸುತ್ತದೆ ಮತ್ತು ಸುರಕ್ಷತಾ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಅದು ಹೇಳಿದೆ,

ಈ ಗಾರ್ಡ್ ಗಳಿಂದ ವಾಹನ ಚಾಲಕರಿಗೆ, ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸವಾರರ ಜೀವಕ್ಕೆ ಮಾರಕವಾಗಿ ಪರಿಣಮಿಸಿದೆ.

ಕ್ರಾಶ್ ಗಾರ್ಡ್ ಗಳ ಅಳವಡಿಕೆಯಿಂದ ಅಪಘಾತದ ಸಂದರ್ಭದಲ್ಲಿ ವಾಹನ ಸುರಕ್ಷತೆಗಾಗಿ ಅಳವಡಿಸಿರುವ ಗಾಳಿಯ ಚೀಲಗಳು (Air Baloon) ಸರಿಯಾಗಿ ತೆರೆದುಕೊಳ್ಳದೆ ,ಚಾಲಕನ ಸುರಕ್ಷತೆಗೆ ತಡೆಯನ್ನುಂಟು ಮಾಡುತ್ತದೆ.

ಮತ್ತೊಂದೆಡೆ ಇದು ಉಕ್ಕು ಅಥವಾ ಸ್ಟೀಲ್ ನಿಂದ ತಯಾರಿಸಲ್ಪಡುವ ಕಾರಣ ಪಾದಚಾರಿ ಅಥವಾ ದ್ವಿಚಕ್ರದ ವಾಹನ ಸವಾರರಿಗೂ ತೀವ್ರವಾಗಿ ಹಾನಿಮಾಡುತ್ತದೆ ಎಂದು ವರದಿಗಳು ಸೂಚಿಸುತ್ತವೆ.

ವರದಿಗಳ ಪ್ರಕಾರ 2015 ರಲ್ಲಿ ರಸ್ತೆ ಅಪಘಾತದಲ್ಲಿ ಕೇವಲ 1.5 ಲಕ್ಷ ಜನರು ಈ ಬುಲ್ ಗಾರ್ಡಿನಿಂದ ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸಾರಿಗೆ ಸಚಿವಾಲಯ ಬುಲ್ ಗಾರ್ಡುಳ ಬಳಕೆಯನ್ನು ನಿಷೇಧಿಸಲು ಚಿಂತನೆ ನಡೆಸಿದೆ.

ನಿಷೇದದ ಸಂದರ್ಭದಲ್ಲಿ ಅದರ ಉಲ್ಲಂಘನೆ ಆದಲ್ಲಿ 1,000 ರಿಂದ 5,000 ವರೆಗೆ ದಂಡ ವಿಧಿಸಬಹುದು ಮತ್ತು ಮೂರು ತಿಂಗಳ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *