LATEST NEWS
NH66 ಅವ್ಯವಸ್ಥೆ : ಡಿವೈಎಫ್ ಐ ನಿಂದ ಹೆದ್ದಾರಿ ಪ್ರಾಧಿಕಾರದ ಅಣಕು ಶವ ಯಾತ್ರೆ
NH66 ಅವ್ಯವಸ್ಥೆ : ಡಿವೈಎಫ್ ಐ ನಿಂದ ಹೆದ್ದಾರಿ ಪ್ರಾಧಿಕಾರದ ಅಣಕು ಶವ ಯಾತ್ರೆ
ಮಂಗಳೂರು, ಡಿಸೆಂಬರ್. 27 : ಮಂಗಳೂರು- ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮಾಡದ ಹೆದ್ದಾರಿ ಪ್ರಾಧಿಕಾರದ ನಡೆಯನ್ನು ಖಂಡಿಸಿ ಅಣಕು ಶವ ಯಾತ್ರೆಯನ್ನು ಬೈಕಂಪಾಡಿ ಬಳಿ ನಡೆಸಲಾಯಿತು.
ಬೈಕಂಪಾಡಿ ಎ ಪಿ ಎಂ ಸಿ ಮಾರುಕಟ್ಟೆಯ ಬಳಿಯಿಂದ ದೀಪಕ್ ಪೆಟ್ರೊಲ್ ಪಂಪ್ ವರಗೆ ಶವಯಾತ್ರೆ ಕೊಡೊಯ್ಯಲಾಯಿತು.
ಬಳಿಕ ಬೃಹತ್ ಹೆದ್ದಾರಿ ಗುಂಡಿಯಲ್ಲಿ ಅಣಕು ಶವವನ್ನು ಸಾರ್ವಜನಿಕರ ದರ್ಶನಕ್ಕೆ ಇಟ್ಟು ರಸ್ತೆ ತಡೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರುಗಳು ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಹೊಂಡಮಯವಾಗಿದೆ.
ಅನೇಕ ಬೃಹತ್ ಹೊಂಡಗಳಿಂದ ಹೆದ್ದಾರಿಯಲ್ಲಿ ಪ್ರತಿ ನಿತ್ಯ ಹತ್ತಾರು ಅಪಘಾತಗಳು ನಿರಂತವಾಗಿ ನಡೆಯುತ್ತಿವೆ, ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕಾದ ಹೆದ್ದಾರಿ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿದೆ.
ಹೆದ್ದಾರಿ ದುರುಸ್ಥಿ ಮಾಡದೇ ಟಾಲ್ ಸಂಗ್ರಹ ಕೂಡ ಮಾಡಲಾಗುತ್ತಿದೆ. ಈ ಕೂಡಲೇ ಕ್ರಮ ಕಯಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನಾರ್ಥವಾಗಿ ಪ್ತತಿಟನಕಾರರು ಅದೇ ಹೆದ್ದಾರಿ ಗುಂಡಿಯಲ್ಲಿ ಶವ ದಹನ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಮುನೀರ್ ಕಾಟಿಪಳ್ಳ, ಬಿ ಕೆ ಇಮ್ತಿಯಾಜ್, ದಯಾನಂದ ಶೆಟ್ಟಿ, ಶ್ರೀನಾಥ್ ಕುಲಾಲ್, ಅಬೂಬಕ್ಕರ್ ಬಾವಾ, ಶ್ರೀನಿವಾಸ ಹೊಸಬೆಟ್ಟು, ಮಕ್ಸೂದ್, ಅಜ್ಮಲ್ ಅಹ್ಮದ್, ನೌಷದ್ ಬಾವಾ ಮತ್ತಿತರರು ಹಾಜರಿದ್ದರು.
You must be logged in to post a comment Login