BANTWAL
ಕರ್ನಾಟಕದಲ್ಲಿ ಒಟ್ಟು ಶೇ.69 ಮತದಾನ, ; ದ.ಕ. ಶೇ.76.05, ಉಡುಪಿ ಶೇ.76.06 ಮತದಾನ..!
ಬೆಂಗಳೂರು: ರಾಜ್ಯದ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದ್ದು, ಜನ ಉತ್ಸಾಹದಿಂದಲೇ ಮತಚಲಾಯಿಸಿದ್ದಾರೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾನವು ಬಹುತೇಕ ಶಾಂತಿಯುತವಾಗಿತ್ತು. ರಾಜ್ಯದಲ್ಲಿ ಶೇ.69ರಷ್ಟು ಮತದಾನ ಆಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.74.87ರಷ್ಟು ಮತದಾನ ಆಗಿದ್ದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.49.37ರಷ್ಟು ಮತದಾನವಾಗಿದೆ. ಸಂಜೆ 6 ಗಂಟೆ ವೇಳೆಗೆ ಮತದಾನ ಪ್ರಕ್ರಿಯೆ ಮುಗಿಯಿತು. ಮಂಡ್ಯ-ಶೇ.74.87, ಕೋಲಾರ-ಶೇ.73.25, ಉಡುಪಿ ಚಿಕ್ಕಮಗಳೂರು-ಶೇ.76.06, ದಕ್ಷಿಣ ಕನ್ನಡ-ಶೇ.76.05, ಹಾಸನ-ಶೇ.72.13, ತುಮಕೂರು-ಶೇ.72.10, ಚಿಕ್ಕಬಳ್ಳಾಪುರ-ಶೇ.71.85, ಚಾಮರಾಜನಗರ- ಶೇ.69.86, ಚಿತ್ರದುರ್ಗ-ಶೇ.67.52, ಮೈಸೂರು-ಶೇ.67.55, ಬೆಂಗಳೂರು ಗ್ರಾಮಾಂತರ-ಶೇ.61.78, ಬೆಂಗಳೂರು ಉತ್ತರ-ಶೇ.51.51, ಬೆಂಗಳೂರು ಕೇಂದ್ರ-ಶೇ.49.77 ಹಾಗೂ ಬೆಂಗಳೂರು ದಕ್ಷಿಣ-ಶೇ.49.37ರಷ್ಟು ಮತದಾನವಾಗಿದೆ.
ರಾಜ್ಯದ ಈ ಹಳ್ಳಿಯಲ್ಲಿ 100% ಮತದಾನ :
ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆ ಎಂಬ ಗ್ರಾಮದಲ್ಲಿ ಶೇಕಡಾ 100 ರಷ್ಟು ಮತದಾನವಾಗಿದೆ. ಗ್ರಾಮದಲ್ಲಿ 111 ಮತದಾರರಿದ್ದು, ಮತದಾನ ಮುಗಿಯುವ ಎರಡು ಗಂಟೆಗೆ ಎಲ್ಲರೂ ಮತದಾನ ಮಾಡಿದ್ದಾರೆ.