LATEST NEWS
ರೈಲ್ವೆ ಹಳಿ ದಾಟಲು ಹೋಗಿ ಮಗು ಸಹಿತ ಮೂವರ ಸಾವು
ರೈಲ್ವೆ ಹಳಿ ದಾಟಲು ಹೋಗಿ ಮಗು ಸಹಿತ ಮೂವರ ಸಾವು
ಕಾಸರಗೋಡು ಜನವರಿ 31: ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಮೂವರ ಮೃತಪಟ್ಟ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಒಂದು ಮಗು ಈ ದುರ್ಘಟನೆಯಲ್ಲಿ ಸಾವನಪ್ಪಿದೆ.
ಒಂದು ರೈಲಿನಿಂದ ಇಳಿದು ಇನ್ನೊಂದು ರೈಲು ಹತ್ತಲು ರೈಲ್ವೆ ಹಳಿ ದಾಟುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮಂಗಳೂರಿನಿಂದ ಕಾಸರಗೋಡು ಕಡೆಗೆ ಚಲಿಸುತ್ತಿದ್ದ ರೈಲಿನಡಿಗೆ ಸಿಲುಕಿ ಮೂವರು ಮೃತಪಟ್ಟಿದ್ದಾರೆ.
ಮೃತರನ್ನು ಪೊಸೋಟ್ ನ ಆಮಿನಾ , ಆಯಿಶಾ ಹಾಗೂ ಆಯಿಶಾರ ಪುತ್ರ ತಾಮೀಲ್ ಎಂದು ಗುರುತಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
You must be logged in to post a comment Login