LATEST NEWS
ಬಶೀರ್ ಹತ್ಯೆ ಸಮರ್ಥನೆ ಜಗದೀಶ್ ಶೇಣವ ವಿರುದ್ದ ಪ್ರಕರಣ ದಾಖಲು
ಬಶೀರ್ ಹತ್ಯೆ ಸಮರ್ಥನೆ ಜಗದೀಶ್ ಶೇಣವ ವಿರುದ್ದ ಪ್ರಕರಣ ದಾಖಲು
ಮಂಗಳೂರು ಜನವರಿ 31: ಬಶೀರ್ ಹತ್ಯೆ ಬಗ್ಗೆ ಸಮರ್ಥನೆ ನೀಡಿದ ವಿಶ್ವಹಿಂದೂ ಪರಿಷತ್ ಮುಖಂಡನ ಮೇಲೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ವಿಎಚ್ ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ದೀಪಕ್ ರಾವ್ ಅಮಾಯಕನಾಗಿದ್ದು, ಆತನ ಹತ್ಯೆಯ ಪ್ರತೀಕಾರವಾಗಿ ಬಶೀರ್ ಕೊಲೆಯಾಗಿದೆ ಅಲ್ಲದೇ ಬಶೀರ್ ಹತ್ಯೆಯಾಗಿದ್ದಕ್ಕೆ ನಮಗೇನೂ ಚಿಂತೆಯಿಲ್ಲ ಎಂದು ಹೇಳಿದ್ದರು.
ಮುಗ್ಧ ಹಿಂದೂಗಳು ಪ್ರತೀಕಾರಕ್ಕೆ ಹತ್ಯೆಯಾಗಬೇಕಾದರೆ, ಬಶೀರ್ ಹತ್ಯೆ ಮಾಡ್ಬಾರ್ಡಾ? ಹಿಂದೂಗಳ ರಕ್ಷಣೆಗೆ ಒಂದು ವರ್ಗ ತಯಾರಾಗಿದ್ದು, ಹಿಂದೂ ಸಮಾಜ ರೊಚ್ಚಿಗೆದ್ದಿದೆ ಎಂದು ಹೇಳಿಕೆಯನ್ನು ಜಗದೀಶ್ ಶೇಣವ ನೀಡಿದ್ದರು. ಅಲ್ಲದೇ ಬಶೀರ್ ಹತ್ಯೆ ಬಗ್ಗೆ ಸಮರ್ಥನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸ್ವ ಹಿತಾಸಕ್ತಿ ಪ್ರಕರಣ ದಾಖಲಿಸಿದ್ದ ಬಂದರು ಠಾಣಾ ಪಿಎಸ್ ಐ ಅನಂತ ಮುರುಡೇಶ್ವರ 153 (A), 116 ಐಪಿಸಿ ಸೆಕ್ಷನ್ ನಡಿ ಪ್ರಕರಣ ದಾಖಲಿಸಿದ್ದಾರೆ.
You must be logged in to post a comment Login