Connect with us

    LATEST NEWS

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಒರ್ವನ ಬಂಧನ

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಒರ್ವನ ಬಂಧನ

    ಮಂಗಳೂರು ಜನವರಿ 31: ಮಂಗಳೂರು ಅಂತರಾಷ್ಟ್ರೀಯವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸಿದ ಯುವಕನನ್ನು ಮಂಗಳೂರು ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ.

    ದುಬೈನಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದಿಳಿದ ಕಾಸರಗೋಡು ನಿವಾಸಿ ಅಹ್ಮದ್ ನಬೀಲ್ ಗಫೂರ್ ಎಂಬವರನ್ನು ಕಸ್ಟಮ್ಸ್ ಅಧಿಕಾರಿಗಳು ತನಿಖೆಗೆ ಒಳಪಡಿಸಿದಾಗ ಅಕ್ರಮ ಚಿನ್ನದ ಬಿಲ್ಲೆಗಳು ಪತ್ತೆಯಾಗಿವೆ.

    ಮೊಬೈಲ್ ಪೌಚ್ ನಲ್ಲಿ ಚಿನ್ನದ ಬಿಲ್ಲೆಗಳನ್ನು ಅಡಗಿಸಿಟ್ಟು ಅಕ್ರಮ ಸಾಗಾಟಕ್ಕೆ ಪ್ರಯತ್ನಿಸಿದ್ದ, ಡಿಆರ್ ಐ ಅಧಿಕಾರಿಗಳು ವಿಮಾನದ ದ್ವಾರದ ಬಳಿಯೇ ನಬೀಲ್ ನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಒಟ್ಟು 15 ಚಿನ್ನದ ಬಿಲ್ಲೆಗಳನ್ನು ಮೊಬೈಲ್ ನ ಪೌಚ್ ನೊಳಗೆ ಅಡಗಿಸಿಟ್ಟು ತಂದಿದ್ದ. ಪತ್ತೆಯಾದ ಚಿನ್ನದ ಒಟ್ಟು ತೂಕ 1.28 ಕಿಲೋ ಗ್ರಾಂ ಎಂದು ಹೇಳಲಾಗಿದೆ.

    ವಶಪಡಿಸಿಕೊಳ್ಳಲಾದ ಅಕ್ರಮ ಚಿನ್ನದ ಒಟ್ಟು ಮೊತ್ತ 39 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಹ್ಮದ್ ನಬೀಲ್ ಗಫೂರ್ ಅವರನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply